ಬೆಂಗಳೂರು: ನಂದಿನಿ ಹಾಲು, ಪೆಟ್ರೋಲ್, ಡೀಸೆಲ್ ಬಳಿಕ, ಬೆಂಗಳೂರು ನಗರದ ನಿವಾಸಿಗಳಗೆ ರಾಜ್ಯ ಸರ್ಕಾರ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಕಾವೇರಿ ಕುಡಿಯೋ ನೀರಿನ ದರ ಏರಿಕೆ ಬಹುತೇಕ ಫಿಕ್ಸ್ ಆಗಿದ್ದು ನಾಳೆ ಅಧಿಕೃತ ಆದೇಶ ಹೊರಬೀಳಲಿದೆ.
ಒಂದು ಲೀಟರ್ ನೀರಿಗೆ 1ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. 50 ಸಾವಿರದಿಂದ 1ಲಕ್ಷ ಲೀಟರ್ ನೀರಿಗೆ 1 ಲೀಟರ್ ಹೆಚ್ಚಳವಾಗಲಿದೆ. ಏಪ್ರಿಲ್ 1ರಿಂದಲೇ ಕಾವೇರಿ ನೀರಿನ ದರ ಏರಿಕೆಯಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಇದರಿಂದ ಇನ್ನು ಮುಂದೆ ಕಾವೇರಿ ನೀರು ಬಳಕೆ ಮಾಡುವ ಮನೆಗಳಿಗೆ ಪ್ರತಿ ತಿಂಗಳೂರು 30-ರಿಂದ 40ರೂ. ಹೆಚ್ಚುವರಿ ಹೊರೆಯಾಗಲಿದೆ. ಒಟ್ಟು ನಾಲ್ಕು ಸ್ಲಾಬ್ ಗಳಲ್ಲಿ ನೀರಿನ ದರ ಏರಿಕೆ ಮಾಡಲಾಗಿದೆ. 2014 ಬಳಿಕ ಸುಮಾರು 11 ವರ್ಷದ ಬಳಿಕ ನೀರಿನ ದರ ಏರಿಕೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಕುಡಿಯುವ ನೀರಿನ ದರ ಏರಿಕೆ ಮಾಡಲು ಬೆಂಗಳೂರು ಜಲಮಂಡಳಿ ನಿರ್ಧಾರ ಮಾಡಿದೆ.
ಎಷ್ಟೆಷ್ಟು ನೀರಿನ ದರ ಏರಿಕೆ..
ಗೃಹಬಳಕೆ ನೀರು: ಗರಿಷ್ಠ 1 ಲೀಟರ್ಗೆ ಒಂದು ಪೈಸೆ ಹೆಚ್ಚಳ
0-8 ಸಾವಿರ ಲೀಟರ್: 0.15 ಪೈಸೆ ಹೆಚ್ಚಳ
8-25 ಸಾವಿರ ಲೀಟರ್ : 0.40 ಪೈಸೆ ಹೆಚ್ಚಳ
25 ಸಾವಿರ ಲೀಟರ್ : 80 ಪೈಸೆ ಏರಿಕೆ
50 ಸಾವಿರದಿಂದ 1 ಲಕ್ಷ ಲೀಟರ್ : 1 ಪೈಸೆ ಹೆಚ್ಚಳ
ಮೊದಲೇ ಹಾಲು, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬರೆಯಿಂದ ಕಂಗಾಲಾಗಿದ್ದ ಬೆಂಗಳೂರು ಜನತೆ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.