ಬೆಂಗಳೂರು:- ಗ್ಯಾಸ್ ಬೆಲೆ 50 ರೂ. ಹೆಚ್ಚಳಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕರೆಂಟ್ ಬಿಲ್ ನೋಡಿ ಶಾಕ್ ಆದ ಕಂಗನಾ..ವಾಸವಿಲ್ಲದ ಮನೆಯಲ್ಲಿ ಬಂದಿದೆಷ್ಟು ಎಲೆಕ್ಟ್ರಿಸಿಟಿ ಬಿಲ್?
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್ ಸ್ನೇಹಿತರು ಮೊದಲು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
2004ರಿಂದ 2014ರವರೆಗೆ ಕಾಂಗ್ರೆಸ್ನ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಒಂದು ಎಲ್ಪಿಜಿ ಸಿಲಿಂಡರ್ನ ಬೆಲೆ 1,241 ರೂ. ಇತ್ತು. ಈಗ ನರೇಂದ್ರ ಮೋದಿ ಸರ್ಕಾರದಲ್ಲಿ 854 ರೂ. ಇದೆ. 50 ರೂ. ಜಾಸ್ತಿ ಮಾಡಿದ ಮೇಲೆಯೂ ಗ್ಯಾಸ್ ಬೆಲೆ 850 ರೂ. ಮಾತ್ರ ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಕಾಂಗ್ರೆಸ್ ಅಪಪ್ರಚಾರಗಳು,ಬಿಜೆಪಿ ಜೆಡಿಎಸ್ ಏನೂ ಆಗಿದೆ ಅನ್ನೋದು ಸುಳ್ಳು. ಶೀಘ್ರದಲ್ಲೇ ಕೋಆರ್ಡಿನೇಷನ್ ಕಮಿಟಿ ಆಗುತ್ತೆ. ರಾಜ್ಯದಲ್ಲಿ ದೇವೇಗೌಡ ಕಿಚ್ಚು ಇದೆ ಅಲ್ವ. ರೈತರ ಪರ,ನೀರಾವರಿ ಯೋಜನೆ ಗಳ ಬಗ್ಗೆ ಕೊಡುಗೆ ಇದೆ ಅಲ್ವ. ರಾಷ್ಟ್ರೀಯ ಪಕ್ಷಗಳ ಮೀರಿ ಮುಂದೆ ಬರ್ತೇವೆ. ನಾನಾ ಕಾರಣಗಳಿಂದ ನಾವು ೪೦ ರಿಂದ ೧೮ ಕ್ಕೆ ಬಂದಿದ್ದೇವೆ. ಈ ಬಿಜೆಪಿ ಜೊತೆ ವಿಲೀನ ಆಗುವುದಿಲ್ಲ. ಹಾಗಾಗಿ ನಿಮ್ಮ ಮಾತನ್ನ ವಾಪಸ್ ತಿಳಿದುಕೊಳ್ಳಬೇಕು. ನಾವು ಬಿಜೆಪಿ ಮೈತ್ರಿ ಇರುತ್ತೆ ಎಂದರು.
ಇನ್ನೂ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಜನರಿಗೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ. ಪ್ರಭಾವಿ ಸಚಿವರು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ೧೬ ನೇ ಬಜೆಟ್ ಮಂಡಿಸಿರುವ ಸಿದ್ರಾಮಣ್ಣ ಅವ್ರು ಎರಡು ವರ್ಷಗಳಲ್ಲಿ ೨.೨೫ ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡಿರೋದು ತಪ್ಪು ಅಂತ ನಾನು ಹೇಳಿಲ್ಲ. ಐತಿಹಾಸಿಕ ಬಜೆಟ್ ಮಂಡಿದ್ದೇವೆ ಅಂತ ಅವ್ರ ಪಕ್ಷದವರು ಬೆನ್ನು ತಟ್ಟಿಕೊಂಡ್ರಿ. ಸಾಲ ಮಾಡಿ ರಾಜ್ಯದ ಜನತೆ ಮೇಲೆ ಎಷ್ಟು ಹೊರೆ ಹಾಕಿದ್ದೀರಾ.ಆ ಸಾಲದ ಹಣದಿಂದ ಎನಾದ್ರು ಮೂಲಸೌಕರ್ಯ ಅಭಿವೃದ್ಧಿ ಗೆ ಬಳಸಿಕೊಳ್ಳಿದ್ದೀರಾ!? ಸಾಲವನ್ನು ಅಭಿವೃದ್ಧಿ ದೃಷ್ಟಿಯಿಂದ ಮಾಡಿದ್ದೀರಾ!? ಅಥವಾ ನೀವು ಸುಳ್ಳು,ಡೊಳ್ಳು ಯೋಜನೆಗಳಿಗೆ ಕೊಟ್ಟಿದ್ದೀರಾ ಇದನ್ನ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗ್ಯಾರಂಟಿ ಯಿಂದ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ತೆಲಂಗಾಣದಲ್ಲಿ ಸಿಎಂ ಎಷ್ಟು ಸಾಲ ಆಗಿದೆ ಅಂತ ಗೊತ್ತಾಗಿಲ. ಗ್ಯಾರಂಟಿಗಳಿಂದ ಸಾಲ ಆಗಿದೆ. ಮುಂದೆ ಎಲ್ಲಿ ದಿವಾಳಿ ಆಗುತ್ತೆ ಅಂತ ಅಲ್ಲಿನ ಸಿಎಂ ಹೇಳಿದ್ದಾರೆ.ಗ್ಯಾರಂಟಿ ಘೋಷಣೆ ಮಾಡುವ ಮುನ್ನ ನಮ್ಮ ಆರ್ಥಿಕ ಪರಿಸ್ಥಿತಿ ಅವಲೋಕಿದೆ ತೀರ್ಮಾನ ಮಾಡಿದ್ದಾರೆ.ನಾವು ಗ್ಯಾರಂಟಿ ಯೋಜನೆ ನಮ್ಮ ವಿರೋಧ ಇಲ್ಲ. ಅದರೆ ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಾ? ಆಡಳಿತ ಪಕ್ಷ ಶಾಸಕರು,ಅನುಭವಿ ಶಾಸಕರು ಇದ್ದಾರೆ. ಆಡಳಿತ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ ಸಂದರ್ಭದಲ್ಲಿ ಅವ್ರ ಪರಿಸ್ಥಿತಿ ನಿಮಗೆ ತಿಳಿಯುತ್ತೆ. ರಾಜ್ಯದಲ್ಲಿ ಅಭಿವೃದ್ಧಿ ಕಾಣದಂತೆ ನೋಡಬಹುದು.ಇತ್ತೀಚೆಗೆ ೧೦ ಕೋಟಿ ನೀಡಿದ್ದಾರೆ. ಆ ೧೦ ಕೋಟಿಯಲ್ಲಿ ಎಷ್ಟು ರಸ್ತೆ ಅಭಿವೃದ್ಧಿ ಮಾಡೋಕೆ ಆಗುತ್ತೆ. ಇದು ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಗೆ ತಲುಪಿದೆ. ಎಸ್ಸಿ ಎಸ್ಟಿ ಅಭಿವೃದ್ಧಿ ಗೆ ನಾವು ಶ್ರಮಿಸಿದ್ದೇವೆ ಕಾಂಗ್ರೆಸ್ ಸಂಸದರು ಹೇಳಿದ್ದಾರೆ ರಾಹುಲ್ ಗಾಂಧಿ ಸಂವಿಧಾನ ಪುಸ್ತಕವನ್ನು ಗಂಟೆ ಅಲ್ಲಾಡಿಸಿದಾಗೆ ಅಲ್ಲಾಡಿಸುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.