Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಾಂಗ್ರೆಸ್‌ ಸರ್ಕಾರದಲ್ಲೂ ಭ್ರಷ್ಟಾಚಾರ ನಡಿತಿದೆ: ಒಪ್ಪಿಕೊಂಡ ಬಸವರಾಜ ರಾಯರೆಡ್ಡಿ

    By Author AINApril 9, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಎಂದು ರಾಜ್ಯ ಸರ್ಕಾರವನ್ನೇ ಭ್ರಷ್ಟ ಸರ್ಕಾರ ಎಂದು ಟೀಕಿಸಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉಲ್ಟಾ ಹೊಡೆದಿದ್ದಾರೆ.

    ನಾನು ನಿನ್ನೆ ದಿನ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಮ್ಮ ಸರ್ಕಾರದಲ್ಲಿ ಡಾ. ನಂಜುಂಡಪ್ಪ ವರದಿಯ ಅನುಷ್ಠಾನ ಆದ ಮೇಲೆ ಏನೆಲ್ಲಾ ಆಗಿದೆ ಎಂದು ಹೇಳಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಗುಣಮಟ್ಟದ ಕಾಮಗಾರಿ ಆಗ್ತಿಲ್ಲ.  ಹಳೇ ಮೈಸೂರು ಭಾಗದಲ್ಲಿ ಗುಣಮಟ್ಟ ಆಗ್ತಿದೆ ಅಂತಾ ಹೇಳಿದೆ. ಇದೊಂದು ಭ್ರಷ್ಟವಾದ ರಾಜ್ಯವಾದ ವ್ಯವಸ್ಥೆ ಆಗಿದೆ ಅಂತಾ ಹೇಳಿದ್ದೇನೆ. ಈ ವ್ಯವಸ್ಥೆ ಸರಿಯಲ್ಲ, ಸರಿಯಾಗಿ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಯರಡ್ಡಿ ಸಮರ್ಥನೆ ಮಾಡಿಕೊಂಡಿದ್ದಾರೆ.

    ನಾನು ಹೇಳಿದ್ದು ಭ್ರಷ್ಟಾಚಾರ ಕ್ಕೆ ಆಸ್ಪದವಿಲ್ಲದಂತೆ ಉತ್ತಮ ವ್ಯವಸ್ಥೆ ಕೊಡಿ ಎಂದು ಹೇಳಿದ್ದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡಿತಿದೆ, ಅದನ್ನು ಹತೋಟಿಗೆ ತರಬೇಕು. ಕರ್ನಾಟಕಕ್ಕೆ ಒಳ್ಳೆಯದಾಗಬೇಕು ಅಂತಾ ಹೇಳಿದ್ದು. ನಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿದೆ, ನಮ್ಮ ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತಾ ನಾನು ಹೇಳಿಲ್ಲ.

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಕಾಮಗಾರಿ ಜಾಸ್ತಿ ಆಗ್ತಿದೆ. ಸಿದ್ದರಾಮಯ್ಯ ನವರ ವಿಚಾರದಲ್ಲಿ ನನಗೆ ಎರಡು ಮಾತು ಇಲ್ಲ. ಅವರು ಇಡೀ ದೇಶದಲ್ಲೇ ಅತ್ಯುತ್ತಮ ಸಿಎಂ ಎಂದ ರಾಯರೆಡ್ಡಿ, ಸಿಎಂ ಅವರು ನನಗೆ ಸಚಿವ ಸ್ಥಾನ ಕೊಡಲಿ, ಬಿಡಲಿ I stand with CM ಎಂದಿದ್ದಾರೆ.

    ನಾನು ಯಾವುದೇ ಪಕ್ಷದ ವಿರುದ್ಧ ಮಾತನಾಡಿಲ್ಲ, ಪಕ್ಷದ ವಿರುದ್ಧವೂ ಮಾತನಾಡಿಲ್ಲ. ಅಧಿಕಾರಿಗಳ ಕಳಪೆ ಕೆಲಸದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು. ರಾಜ್ಯ ಭ್ರಷ್ಟಾಚಾರದಲ್ಲಿದೆ ಅಂತಾ ನಾನು ಹೇಳಿಲ್ಲ. ನಾನು ಜನರಲ್ ಆಗಿ ನಡೆದುಬಂದ ಭ್ರಷ್ಟಾಚಾರ ವ್ಯವಸ್ಥೆ ಬಗ್ಗೆ ಹೇಳಿದ್ದೀನಿ. ಸಿಎಂ‌ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತವಾಗಿದ್ದಾರೆ.  ಇವತ್ತಿನ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ನಾನು ಹೇಳೋಕೆ ಆಗಲ್ಲ. ತಮ್ಮ ಸರ್ಕಾರ ದಲ್ಲೂ ಭ್ರಷ್ಟಾಚಾರ ನಡಿತಿದೆ ಅಂತ ರಾಯರೆಡ್ಡಿ ಒಪ್ಪಿಕೊಂಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಮಳೆ ಅಬ್ಬರ: ಕರ್ನಾಟಕದ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ!

    June 25, 2025

    ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: DCM ಡಿಕೆಶಿ ಭೇಟಿ ಮಾಡಿ ಚರ್ಚಿಸಿದ ಬಿ ಆರ್ ಪಾಟೀಲ್!

    June 25, 2025

    ರಾಜ್ಯ ಸರ್ಕಾರದ ಮಹತ್ವದ ಆದೇಶ: ಎಲ್ಲಾ ಇಲಾಖೆಗಳ ಆಡಳಿತದಲ್ಲಿ ಕನ್ನಡ ಕಡ್ಡಾಯ!

    June 25, 2025

    ವೃದ್ಧಾಶ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ: ಹೆತ್ತ ಮಗನಿಂದ ಮನನೊಂದು ಸೂಸೈಡ್?

    June 25, 2025

    ಇನ್ಮುಂದೆ ಎಲ್ಲಾ ಇಲಾಖೆಗಳಲ್ಲೂ ‘ಕನ್ನಡ ಬಳಕೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

    June 25, 2025

    ರಾಜ್ಯದ ಜನರಿಗೆ ಪ್ಲ್ಯಾನ್ ಅನುಮತಿ ಇಲ್ಲದೆ ಮನೆ ಕಟ್ಟಲು ಹೋಗಬಾರದು: ಡಿಸಿಎಂ ಡಿಕೆ ಶಿವಕುಮಾರ್

    June 25, 2025

    ಬಡವರಿಂದ ಹಣ ಪಡೆಯುವ ದರಿದ್ರ ಜಮೀರ್’ಗಿಲ್ಲ: ಸಚಿವರ ಪರ ಶಾಸಕ ರವಿ ಗಣಿಗ ಬ್ಯಾಟಿಂಗ್

    June 25, 2025

    ಅಂತಾರಾಷ್ಟ್ರೀಯ ಯೋಗ ದಿನ: “ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ” ವಿಶ್ವವಿದ್ಯಾಲಯದಿಂದ ಯೋಗಾಭ್ಯಾಸ

    June 25, 2025

    ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ

    June 25, 2025

    ಯುನೈಟೆಡ್ ಎಲಿಸಿಯಂ ಅಪಾರ್ಟ್ಮೆಂಟ್’ನಲ್ಲಿ ಯಶಸ್ವಿಯಾಗಿ ನಡೆದ ಬೃಹತ್ “ಉಚಿತ ಆರೋಗ್ಯ ಶಿಬಿರ”

    June 25, 2025

    ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ..!

    June 25, 2025

    ಜೂನ್ 27ರಿಂದ 29ರವರೆಗೆ ಫೋಟೋ ಟುಡೇ ವಸ್ತು ಪ್ರದರ್ಶನ

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.