ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ ಎನ್ನುವ ಮಾತಿದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇವೆ ಎಂದರೆ, ಕೆಲವೊಂದು ಕಾಯಿಲೆಯ ರೋಗಲಕ್ಷಣಗಳು ನಮ್ಮ ದೇಹವನ್ನು ಸೇರಿಕೊಂಡು, ಏನಾದರೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದಾಗ ಬಳಿಕವಷ್ಟೇ ನಮಗೆ ಆ ಕಾಯಿಲೆಯ ಬಗ್ಗೆ ತಿಳಿಯು ವುದು. ಆದರೆ ಹೆಚ್ಚಿನವರು ಇಂತಹ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತಾರೆ ಅಥವಾ ಯಾವು ದೋ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಇರಬಹುದೇನೋ ಎಂದು ಸಮ್ಮನಿರುವುದರಿಂದ, ಮುಂದಿನ ದಿನಗಳಲ್ಲಿ ದೊಡ್ಡ ರೀತಿಯ ಆರೋಗ್ಯಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇರತ್ತದೆ. ಅದರಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದು. ಇದನ್ನು ತಡೆಯಲು ಹೀಗೆ ಮಾಡಿ.
ಗ್ಯಾಸ್, ಇಂಧನ ದರ ಏರಿಕೆ ವಿಚಾರ, ಕಾಂಗ್ರೆಸ್ನದ್ದು ಅರ್ಧ ಸತ್ಯ ; ಬಿವೈ ವಿಜಯೇಂದ್ರ
ಬೇವಿನ ಮರ ನಮ್ಮ ಜೀವನದ ಒಂದು ಭಾಗವಾಗಿದೆ. ನಾವು ಹಲವು ದಿನಗಳಿಂದ ಹಲ್ಲುಜ್ಜಲು ಬೇವಿನ ಪುಡಿ, ಯುಗಾದಿ ಚಟ್ನಿಯಲ್ಲಿ ಬೇವಿನ ಹೂವು ಮತ್ತು ಜ್ವರ ಕಡಿಮೆ ಮಾಡಲು ಬೇವಿನ ಎಲೆಗಳನ್ನು ಬಳಸುತ್ತಿದ್ದೇವೆ. ವಾಸ್ತವವಾಗಿ, ಬೇವು ಒಂದು ಔಷಧೀಯ ಮರವಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಮರದ ಬೇವಿನ ಎಲೆಗಳು ಮತ್ತು ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಕೂದಲು, ಮೂತ್ರಪಿಂಡದ ಆರೋಗ್ಯ ಮತ್ತು ಇತರ ಅಂಗಗಳ ಆರೋಗ್ಯವನ್ನು ಉತ್ತೇಜಿಸುವಲ್ಲಿ ಬೇವಿನ ಎಲೆಗಳು ದಿವ್ಯ ಔಷಧವಾಗಿ ಕಾರ್ಯನಿರ್ವಹಿಸುತ್ತವೆ. ಬೇವಿನ ಎಲೆಗಳು ಪ್ರೋಟೀನ್, ವಿಟಮಿನ್ ಸಿ ಮತ್ತು ಕ್ಯಾರೋಟಿನ್ಗಳಲ್ಲಿ ಸಮೃದ್ಧವಾಗಿವೆ. ಇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಸಹ ಹೊಂದಿವೆ. ಇದರ ಅಪರೂಪದ ಪ್ರಯೋಜನಗಳನ್ನು ಈಗ ತಿಳಿಯೋಣ..
ಬೇವಿನ ಚಹಾ ತಯಾರಿಸಲು, 2-3 ಬೇವಿನ ಹಣ್ಣುಗಳು ಮತ್ತು 3-4 ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಮೂತ್ರಪಿಂಡ ಮತ್ತು ಪ್ರಾಸ್ಟೇಟ್ ಆರೋಗ್ಯವನ್ನು ಸುಧಾರಿಸಲು ಬೇವಿನ ಚಹಾವನ್ನು ನಿಯಮಿತವಾಗಿ ಸೇವಿಸಬೇಕು. ಬೇವಿನ ಚಹಾವು ಮೂತ್ರವರ್ಧಕ ಗುಣಗಳನ್ನು ಹೊಂದಿದ್ದು, ಮೂತ್ರಪಿಂಡಗಳಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮೂತ್ರಪಿಂಡಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಮತ್ತು ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುವ ಸಂಯುಕ್ತಗಳನ್ನು ಸಹ ಒಳಗೊಂಡಿದೆ.
ಮಲೇರಿಯಾವನ್ನು ತಡೆಯುತ್ತದೆ: ಬೇವಿನ ಬೀಜಗಳಲ್ಲಿರುವ ಸಕ್ರಿಯ ಘಟಕಾಂಶವಾದ ಅಜಾಡಿರಾಕ್ಟಿನ್ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುತ್ತದೆ.. ಮಲೇರಿಯಾ ತಡೆಗಟ್ಟಲು ಬೇವಿನ ಬೀಜಗಳನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಬೀಜಗಳನ್ನು ಒಣಗಿಸಿ ಸೊಳ್ಳೆಗಳು ಬರದಂತೆ ಸುತ್ತಲೂ ಸಿಂಪಡಿಸಬೇಕು. ಇಲ್ಲವಾದರೇ ಬೇವಿನ ಎಣ್ಣೆಯ ಸಾರವನ್ನು ತಯಾರಿಸಿ ಚರ್ಮಕ್ಕೆ ಸೊಳ್ಳೆ ನಿವಾರಕವಾಗಿ ಹಚ್ಚಬಹುದು
ಹಲ್ಲುಗಳಿಗೆ ಒಳ್ಳೆಯದು: ಬೇವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡುವಲ್ಲಿ ಬೇವು ಪ್ರಮುಖ ಪಾತ್ರ ವಹಿಸುತ್ತದೆ. ಹಲ್ಲು ಕೊಳೆತ ಮತ್ತು ಒಸಡು ಕಾಯಿಲೆಯನ್ನು ತಡೆಗಟ್ಟಲು ಸಹ ಇದನ್ನು ಬಳಸಬಹುದು. ಬೇವಿನ ಪುಡಿ ಅಥವಾ ಬೇವಿನ ಟೂತ್ಪೇಸ್ಟ್ನಿಂದ ಹಲ್ಲುಜ್ಜುವುದು, ಬೇವಿನ ಎಲೆಗಳನ್ನು ಅಗಿಯುವುದು, ಬೇವಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದು ಮತ್ತು ಒಸಡುಗಳಿಗೆ ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ದಂತ ಆರೋಗ್ಯ ಸುಧಾರಿಸಬಹುದು.