ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಲ್ ಮೇಲೆ ಹೊರ ಬಂದಿರುವ ನಟ ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ.
ಅದರಂತೆ ಬೆನ್ನು ನೋವಿನ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಗೈರಾಗಿದ್ದ ದರ್ಶನ್ ಅವರು ಗೆಳೆಯ ಧನ್ವೀರ್ ಅಭಿನಯದ ವಾಮನ ಸಿನಿಮಾವನ್ನು ವೀಕ್ಷಿಸಿದ್ದಾರೆ. ಬುಧವಾರ ರಾತ್ರಿ ಜಿಟಿ ಮಾಲ್‌ನಲ್ಲಿ ವಾಮನ ಚಿತ್ರದ ವಿಶೇಷ ಶೋ ಆಯೋಜಿಸಲಾಗಿತ್ತು. ಇದೇ ವೇಳೆ ಚಿಕ್ಕಣ್ಣ ಕೂಡ ಆಗಮಿಸಿದ್ದರು. ಇದು ದರ್ಶನ್ ಗೆ ಕಂಟಕ ಆಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಮೇಲೆ ನಟ ದರ್ಶನ್ ಸಿನಿಮಾ ವೀಕ್ಷಣೆ ಮಾಡಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಚಿಕ್ಕಣ್ಣ ಮೇಲೆ ದರ್ಶನ್ ಪ್ರಭಾವ ಬೀರುತ್ತಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.
ಬೆನ್ನು ನೋವನ್ನು ಲೆಕ್ಕಿಸದೇ ಆಪ್ತನ ಸಿನಿಮಾವನ್ನು ದರ್ಶನ್ ಸುಮಾರು ಮೂರು ಗಂಟೆಗಳ ಕಾಲ ಕುಳಿತು ವೀಕ್ಷಿಸಿದ್ದಾರೆ. ಸಿನಿಮಾ ಮಾಡುವ ಸಂದರ್ಭದಲ್ಲಿ ಚಿಕ್ಕಣ್ಣ ಸಹ ಜೊತೆಯಲ್ಲೇ ಕುಳಿತು ವಾಮನ ವೀಕ್ಷಿಸಿದ್ದಾರೆ. ಚಿಕ್ಕಣ್ಣ ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದರು. ಭೇಟಿಯಾದ ನಂತರ ಬಸವೇಶ್ವರ ನಗರದಲ್ಲಿರುವ ಎಸಿಪಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದ್ದರು. ಇದೀಗ ಮತ್ತೆ ದರ್ಶನ್, ಚಿಕ್ಕಣ್ಣ ಭೇಟಿ ಮಾಡಿರೋದು ಇದೀಗ ದರ್ಶನ್ ಗೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.