ಬೆಂಗಳೂರು:- ಬೆಂಗಳೂರಿನ ರೆವಿನ್ಯೂ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇಷ್ಟು ದಿನ ಬಿಡಿಎಗೆ ಇದ್ದ ಭೂ ಪರಿವರ್ತನೆ ಅಧಿಕಾರವನ್ನು ಇದೀಗ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಇನ್ಮುಂದೆ ರೆವಿನ್ಯೂ ಸ್ವತ್ತುಗಳಿಗೂ ನಕ್ಷೆ ಮಂಜೂರಾತಿ ಭಾಗ್ಯ ದೊರೆಯಲಿದೆ.
ಮಹಾ “ಗಡಿ” ತಗಾದೆ ; ಗಡಿ ಭಾಗದ ವಿದ್ಯಾರ್ಥಿಗಳಿಗೆ ಆಫರ್ ಕೊಟ್ಟು ಸೆಳೆಯುವ ಪ್ರಯತ್ನದಲ್ಲಿ ಶಿವಾಜಿ ವಿವಿ
ಬಿಬಿಎಂಪಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ಆದಾಯ ಹರಿದು ಬರುವ ನಿರೀಕ್ಷೆಯಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೊದಲು ಬಿಡಿಎಗೆ ಇದ್ದ ರೆವಿನ್ಯೂ ಸ್ವತ್ತುಗಳ ಭೂ ಪರಿವರ್ತನೆ ಅಧಿಕಾರವನ್ನು ಇನ್ಮುಂದೆ ಬಿಬಿಎಂಪಿ ನಗರ ಯೊಜನೆ ವಿಭಾಗಕ್ಕೆ ಅಧಿಕಾರ ನೀಡಲಾಗಿದೆ. ಎಡಿಟಿಪಿಗಳಿಗೆ ಭೂ ಪರಿವರ್ತನೆ ಪವರ್ ನೀಡಲಾಗಿದ್ದು, ಕನ್ವರ್ಷನ್ ಮಾಡಿ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಪ್ಲ್ಯಾನ್ ಕೊಡಲು ಅವಕಾಶ ನೀಡಲಾಗಿದೆ.
ಇನ್ನು ಏಕ ನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿ ಅಧಿಕಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಬಿ ಖಾತಾಗಳಿಗೆ ಕಟ್ಟಡ ಮಂಜೂರಾತಿ ನಕ್ಷೆ ಸಿಗುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಧಾರ ರೆವಿನ್ಯೂ ಜಾಗದ ಮಾಲೀಕರ ಸಂಕಷ್ಟ ದೂರ ಮಾಡಿದೆ.