ಮುಂಬೈ: ಭಾರತದ ಆತಿಥ್ಯ ಕ್ಷೇತ್ರವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಜಾಗತಿಕ ಆತಿಥ್ಯ ಕ್ಷೇತ್ರದ ಅಕ್ಕೊರ್ ಮತ್ತು ಭಾರತದ ಇಂಟರ್ ಗ್ಲೋಬ್ ಜತೆ ಮಹತ್ವದ ಸಹಯೋಗಕ್ಕೆ ಸಹಿ ಹಾಕಲಾಗಿದೆ
ಇಂದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆತಿಥ್ಯ ಉದ್ಯಮ ಸೃಷ್ಟಿಸಲು ಅವರ ಸಹಯೋಗವನ್ನು ಸದೃಢಗೊಳಿಸುವುದನ್ನು ಪ್ರಕಟಿಸಿದ್ದು ಇದರಿಂದ ಸರಿಸಾಟಿ ಇರದ ಜಾಲ, ಬ್ರಾಂಡ್ ಗಳ ಪೋರ್ಟ್ ಫೋಲಿಯೊ ಮತ್ತು ಎಲ್ಲ ಮಾರುಕಟ್ಟೆ ವಲಯಗಳಲ್ಲೂ ವಿತರಣೆಯನ್ನು ಒದಗಿಸುತ್ತದೆ. ಭಾರತದ ಏರುಗತಿಯಲ್ಲಿರುವ ಆತಿಥ್ಯ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಮಹತ್ವಾಕಾಂಕ್ಷೆ ಮತ್ತು ಉದ್ಯಮಗಳಲ್ಲಿ ಜಾಗತಿಕ ನಾಯಕರ ಶಕ್ತಿಗಳನ್ನು ಸಂಯೋಜಿಸಿರುವ ಈ ಪ್ಲಾಟ್ ಫಾರಂ 2030ರ ವೇಳೆಗೆ ಅಕ್ಕೊರ್ ಬ್ರಾಂಡ್ಸ್ ಅಡಿಯಲ್ಲಿ 300 ಹೋಟೆಲ್ ಗಳ ಜಾಲ ನಿರ್ಮಿಸುವ ಗುರಿ ಹೊಂದಿದೆ.
ಈ ಮಹತ್ತರ ಸಹಯೋಗವು ಪ್ರತಿ ಪಾಲುದಾರರ ವಿಶಿಷ್ಟ ಶಕ್ತಿಗಳನ್ನು ಒಗ್ಗೂಡಿಸುತ್ತದೆ:
- ಅಕ್ಕೊರ್, ಮುಂಚೂಣಿಯ ಜಾಗತಿಕ ಆತಿಥ್ಯ ಸಮೂಹವಾಗಿದ್ದು ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಪರಿಣಾಮಕಾರಿ ವ್ಯಾಪ್ತಿ ಹೊಂದಿದೆ ಮತ್ತು ಪ್ರಸ್ತುತ ದೇಶದಲ್ಲಿ 71 ಹೋಟೆಲ್ ಗಳನ್ನು ನಿರ್ವಹಿಸುತ್ತಿದ್ದು 40ಕ್ಕೂ ಹೆಚ್ಚು ಅಭಿವೃದ್ಧಿಪಡಿಸುತ್ತಿದ್ದು ಅದರಲ್ಲಿ ಇಕಾನಮಿಯಿಂದ ಐಷಾರಾಮಿ ಬ್ರಾಂಡ್ ಗಳವರೆಗೆ ವಿಸ್ತರಿಸಿವೆ. ಈ ಸಹಯೋಗದ ಮೂಲಕ ಅಕ್ಕೊರ್ ತನ್ನ ಹೆಜ್ಜೆ ಗುರುತನ್ನು ಗಮನಾರ್ಹವಾಗಿ ವಿಸ್ತರಿಸಲಿದೆ ಮತ್ತು ಕಾರ್ಯಾಚರಣೆಗಳನ್ನು ಸುಸೂತ್ರಗೊಳಿಸಲಿದ್ದು ಇಕಾನಮಿಯಿಂದ ಲೈಫ್ ಸ್ಟೈಲ್ ಮತ್ತು ಲಕ್ಷುರಿಯವರೆಗೆ ಎಲ್ಲ ವಲಯಗಳನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಸದೃಢ ಪ್ರಗತಿಗೆ ತನ್ನ ಬದ್ಧತೆಯನ್ನು ಆಳವಾಗಿಸಲು ತನ್ನ ಬದ್ಧತೆಯನ್ನು ತೋರಿದೆ.
ಇಂಟರ್ ಗ್ಲೋಬ್, ಮುಂಚೂಣಿಯ ಭಾರತೀಯ ಕಂಪನಿಯಾಗಿದ್ದು ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಸರಿಸಾಟಿ ಇರದ ಪರಿಣಿತಿಯನ್ನು ತಂದಿದ್ದು ವೈಮಾನಿಕ (ಇಂಡಿಗೊ), ಹೋಟೆಲ್ಸ್ (ಭಾರತ ಮತ್ತು ಅಂತಾರಾಷ್ಟ್ರೀಯವಾಗಿ), ಏರ್ ಲೈನ್ ಮ್ಯಾನೇಜ್ಮೆಂಟ್ ಲಾಜಿಸ್ಟಿಕ್ಸ್, ಟ್ರಾವೆಲ್ ಮತ್ತು ಎಐ ಸನ್ನದ್ಧ ತಂತ್ರಜ್ಞಾನದಲ್ಲಿ ಅದರಲ್ಲಿ ಪೂರ್ವಸಿದ್ಧವಾದ ಉದ್ಯಮಶೀಲತೆಯ ಹಿನ್ನೆಲೆ ಹೊಂದಿದೆ. ಇಂಟರ್ ಗ್ಲೋಬ್ ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಅತ್ಯಂತ ದೊಡ್ಡ ಪಾಲುದಾರನಾಗಿದ್ದು 2025ರ ಹಣಕಾಸು ವರ್ಷದಲ್ಲಿ 400ಕ್ಕೂ ಹೆಚ್ಚು ವಿಮಾನಗಳು 130ಕ್ಕೂ ಹೆಚ್ಚು ತಾಣಗಳಿಗೆ ಸೇವೆ ಒದಗಿಸುತ್ತಿದ್ದು 2200ಕ್ಕೂ ಹೆಚ್ಚು ದೈನಂದಿನ ವಿಮಾನಗಳು ಸಂಚರಿಸುತ್ತಿವೆ. ಇದು ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಜಾಗತಿಕವಾಗಿ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.
ಟ್ರೀಬೊ ಜೊತೆಯಲ್ಲಿ ವಿಶೇಷ ಸಹಯೋಗ
- ಟ್ರೀಬೊ, ಭಾರತದ ಮುಂಚೂಣಿಯ ಬ್ರಾಂಡೆಡ್ ಬಜೆಟ್ ಹೋಟೆಲ್ ಪ್ಲಾಟ್ ಫಾರಂಗಳಲ್ಲಿ ಒಂದಾಗಿದ್ದು 120 ನಗರಗಳಲ್ಲಿ 800 ಹೋಟೆಲ್ ಗಳನ್ನು ತನ್ನ ವಿಶಿಷ್ಟ ತಂತ್ರಜ್ಞಾನ-ಪ್ರೇರಿತ ವಿಧಾನ ಹಾಗೂ ದಕ್ಷ ವಿತರಣೆಯ ವ್ಯವಸ್ಥೆಗಳ ಮೂಲಕ ನಿರ್ವಹಿಸುತ್ತದೆ. ಅಕ್ಕೊರ್ ಮತ್ತು ಇಂಟರ್ ಗ್ಲೋಬ್ ಜಂಟಿಯಾಗಿ ಹೂಡಿಕೆ ಮಾಡುತ್ತವೆ ಮತ್ತು ಟ್ರೀಬೊದಲ್ಲಿ ಅತ್ಯಂತ ದೊಡ್ಡ ಪಾಲುದಾರರಾಗುತ್ತವೆ. ಟ್ರೀಬೊ ಭಾರತದಲ್ಲಿ ಮಾಸ್ಟರ್ ಲೈಸನ್ಸ್ ಒಪ್ಪಂದದ ಮೂಲಕ ಐಬಿಸ್ ಮತ್ತು ಮರ್ಕ್ಯೂರ್ ಬ್ರಾಂಡ್ ಗಳಲ್ಲಿ ಅಭಿವೃದ್ಧಿಪಡಿಸಲಿದೆ.
- ಈ ಸಹಯೋಗದ ಅಡಿಯಲ್ಲಿ ಟ್ರೀಬೊ ಹಲವಾರು ಆಸ್ತಿ ಮಾಲೀಕರೊಂದಿಗೆ ಹತ್ತು ಹೊಸ ಮರ್ಕ್ಯೂರ್ ಗಳಿಗೆ ಒಪ್ಪಂದ ರೂಪಿಸಿಕೊಂಡಿದ್ದು ಭಾರತದಲ್ಲಿ ಬ್ರಾಂಡ್ ವಿಸ್ತರಣೆಯಲ್ಲಿ ಇದು ಮಹತ್ತರ ಮೈಲಿಗಲ್ಲಾಗಿದೆ.
- ಅಕ್ಕೊರ್ ನ ಬ್ರಾಂಡ್ ಗಳು ಭಾರತದ ವಿಸ್ತಾರ ಅನ್ ಬ್ರಾಂಡೆಡ್ ಮಾರುಕಟ್ಟೆಯನ್ನು ತಲುಪಲು ಮತ್ತು ಪ್ರಗತಿಗೆ ವೇಗ ತುಂಬಲು ಟ್ರೀಬೊದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ಸಂಯೋಜಿತ ಅಕ್ಕೊರ್ ಮತ್ತು ಟ್ರೀಬೊ ಪೋರ್ಟ್ ಫೋಲಿಯೊ ಭಾರತದ ಮೂರನೇ ಅತ್ಯಂತ ದೊಡ್ಡ ಆತಿಥ್ಯ ಸಂಸ್ಥೆಯನ್ನು ಸೃಷ್ಟಿಸಲಿದ್ದು 30,000ಕ್ಕೂ ಹೆಚ್ಚು ಕೋಣೆಗಳನ್ನು ಹೊಂದಿರುತ್ತದೆ.