ಆಪಲ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಫ್ಲಿಪ್ಕಾರ್ಟ್ನಲ್ಲಿ ಐಫೋನ್ 16 ಬೆಲೆ ದಾಖಲೆಯಲ್ಲಿ ಇಳಿಕೆ ಕಂಡಿದೆ.
ಆಪಲ್ನ ಇತ್ತೀಚಿನ ಐಫೋನ್ 16 ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಲ್ಲಿ ದಾಖಲೆಯ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಈ ಸಾಧನದ ಮೇಲೆ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಡೀಲ್ಗಳನ್ನು ಸಹ ನೀಡುತ್ತಿದ್ದು, ಐಫೋನ್ 16 ನ ಬೆಲೆಯನ್ನು 40,000 ರೂ. ಗಿಂತ ಕಡಿಮೆಗೆ ನಿಮ್ಮದಾಗಿಸಬಹುದು. ಈ ಸೀಮಿತ ಅವಧಿಯ ಕೊಡುಗೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಆಪಲ್ ಐಫೋನ್ 16 ಅನ್ನು ರೂ. 79,900 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಫ್ಲಿಪ್ಕಾರ್ಟ್ ಪ್ರಸ್ತುತ ಈ ಫೋನನ್ನು ರೂ. 9,901 ನೇರ ಬೆಲೆ ಕಡಿತದೊಂದಿಗೆ ನೀಡುತ್ತಿದೆ. ಪಟ್ಟಿ ಮಾಡಲಾದ ಬೆಲೆ ರೂ. 69,999 ಆಗಿದೆ. ಇದರ ಮೇಲೆ, ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿ ರೂ. 5,000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು ಐಫೋನ್ 16 ಅನ್ನು ಕೇವಲ ರೂ. 64,999 ಗೆ ಲಭ್ಯವಾಗುವಂತೆ ಮಾಡುತ್ತದೆ.
ಇದಲ್ಲದೆ, ಫ್ಲಿಪ್ಕಾರ್ಟ್ ವಿನಿಮಯ ಕೊಡುಗೆಗಳನ್ನು ಸಹ ನೀಡುತ್ತಿದೆ. ಉದಾಹರಣೆಗೆ, ನೀವು ಐಫೋನ್ 13 ಅಥವಾ ಐಫೋನ್ 14 ಹೊಂದಿದ್ದರೆ, ನಿಮ್ಮ ಆ ಫೋನಿನ ಸ್ಥಿತಿಯನ್ನು ಅವಲಂಬಿಸಿ ಐಫೋನ್ 16 ನೊಂದಿಗೆ ವಿನಿಮಯ ಮಾಡಿಕೊಳ್ಳುವಾಗ ನೀವು ರೂ. 29,700 ವರೆಗೆ ರಿಯಾಯಿತಿ ಪಡೆಯಬಹುದು. ಆಗ ಹೊಸ ಐಫೋನ್ ಕೇವಲ ರೂ. 35,299 ಕ್ಕೆ ಸಿಗುತ್ತದೆ.