ಲಕ್ನೋ: ಇದೇ ಏ.11ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಭೇಟಿ ನೀಡಲಿದ್ದು, ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರದ ವಾರಣಾಸಿಗೆ ಭೇಟಿ ನೀಡಲಿದ್ದು, 3,884.18 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್ ತಿಳಿಸಿದ್ದಾರೆ.
ಮುಂಬೈ ದಾಳಿಕೋರ ನಮ್ಮವನಲ್ಲ: ಸ್ಪಷ್ಟನೆ ಕೊಟ್ಟ ಪಾಕ್! ಭಾರತಕ್ಕೆ ಬಂದ ಉಗ್ರ!
ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, 4 ಗ್ರಾಮೀಣ ರಸ್ತೆಗಳು ಮತ್ತು 2 ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ. ನಗರದ ವಿದ್ಯುತ್ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ 15 ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣ, ಹೊಸ ಟ್ರಾನ್ಸ್‌ಫಾರ್ಮರ್, 1,500 ಕಿಮೀ ಹೊಸ ವಿದ್ಯುತ್ ಮಾರ್ಗಗಳ ಸ್ಥಾಪನೆ ಸೇರಿದಂತೆ, 2,250 ಕೋಟಿ ರೂ. ವೆಚ್ಚದ 25 ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೂರು ಹೊಸ ಮೇಲ್ಸೇತುವೆಗಳು, ವಿವಿಧ ರಸ್ತೆ ಅಗಲೀಕರಣ ಕ್ರಮಗಳು, ಶಾಲಾ ನವೀಕರಣ ಕಾರ್ಯಗಳು ಹಾಗೂ ಶಿವಪುರ ಮತ್ತು ಉತ್ತರ ಪ್ರದೇಶದ ಕಾಲೇಜಿನಲ್ಲಿ ಎರಡು ಕ್ರೀಡಾಂಗಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ರೋಹನಿಯಾದ ಮೆಹಂದಿಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.