ಬೆಳಗಾವಿ : ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ಲಾಂಗು ಮಚ್ಚು ಪ್ರದರ್ಶನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಮತ್ತು ಗುರ್ಲಾಪುರ ಗ್ರಾಮದಲ್ಲಿ ಕ್ಷುಲಕ್ಕ ಕಾರಣಕ್ಕೆ ಕೆಲ ಯುವಕರು ಪುಂಡಾಟ ಪ್ರದರ್ಶಿಸಿದ್ದಾರೆ.
ಹಳ್ಳೂರ ಗ್ರಾಮದ ಯುವಕರ ಮೇಲೆ ಅಟ್ಯಾಕ್ ಮಾಡಲು ಗ್ಯಾಂಗ್ ವೊಂದು ಬಂದಿತ್ತು. ಮಚ್ಚು ಲಾಂಗು ಪ್ರದರ್ಶನ ಮಾಡುತ್ತಿದ್ದನ್ನ ಕಂಡು ಗ್ರಾಮಸ್ಥರು ಯುವಕರ ಗ್ಯಾಂಗ್ ತಡೆದಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರೆಲ್ಲಾ ಒಗ್ಗೂಡಿ ಜೀವ ಪಣಕ್ಕಿಟ್ಟು ಇಬ್ಬರನ್ನ ಹಿಡಿದು ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದಾರೆ.
ಇನ್ನೂ ಗಲಾಟೆ ಬಳಿಕ ಗ್ರಾಮದಲ್ಲಿ ಪೊಲೀಸರ ರೌಂಡ್ಸ್ ನಡೆಸಿದ್ದು, ದಾದಾಗಿರಿ ಮಾಡಿದ ಯುವಕರ ವಿರುದ್ಧ ಕ್ರಮಕೈಗೊಳ್ಳುವಂತೆ ಹಳ್ಳೂರ ಗ್ರಾಮಸ್ಥರ ಒತ್ತಾಯಿಸಿದ್ದಾರೆ.