ಕನ್ನಡದಲ್ಲಿ ಮಿಂಚಿ ಈಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಒಬ್ಬರು ನೇಹಾ ಶೆಟ್ಟಿ, ಮಂಗಳೂರು ಮೂಲದ ನೇಹಾ ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. ಮುಂಗಾರು ಮಳೆ-2 ಚಿತ್ರದ ಮೂಲಕ ಕನ್ನಡ ಸಿನಿಮಾಪ್ರೇಮಿಗಳಿಗೆ ಪರಿಚಯವಾದ ಈ ಬ್ಯೂಟಿ ಮೆಹಾಬೂಬಾ ಚಿತ್ರದ ಮೂಲಕ ತೆಲುಗುರಂಗದತ್ತ ಹೆಜ್ಜೆ ಇಟ್ಟರು. ಆ ಬಳಿಕ ಕನ್ನಡ ಚಿತರಂಗದತ್ತ ತಿರುಗಿ ನೋಡಿಯೇ ಇಲ್ಲ.
ಟಿಜೆ ಡಿಲ್ಲು ಸಿನಿಮಾ ಸೂಪರ್ ಸಕ್ಸಸ್ ಬಳಿಕ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಗ್ಯಾಂಗ್ ಆಫ್ ಗೋದಾವರಿ ಚಿತ್ರದ ಮೂಲಕ ಇತ್ತೀಚೆಗೆ ಪ್ರೇಕ್ಷಕರ ಎದುರು ಬಂದಿದ್ದ ನೇಹಾ ಈಗ ಹೊಸ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಶುಭ್ರ ಬಿಳಿ ಬಣ್ಣದ ಬಟ್ಟೆ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನೇಹಾ ಟ್ರೆಡಿಷನಲ್ ಲುಕ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಬಿಳಿ ಬಣ್ಣದ ಲೆಹಂಗದಲ್ಲಿ ಮಂಗಳೂರು ಚೆಲುವೆ ಹಾಟ್ ಗೆಟಪ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಮಂಗಳೂರು ಮದನಾರಿಯ ಮನಮೋಹಕ ಭಾವಲಹರಿ ಸೂಪರ್ ಆಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.