ಬೆಂಗಳೂರು:- ಸರ್ಕಾರಿ ಇಮೇಲ್ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್ಗೆ 1 ಕೋಟಿ ರೂ. ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಅವಧಿಯಲ್ಲಿ ಶೇ. 40 ಕಮಿಷನ್: ತನಿಖೆಗೆ SIT ರಚಿಸಲು ಸಂಪುಟ ಸಭೆ ತೀರ್ಮಾನ!
ಬಂಧಿತರನ್ನು ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬ್ಯಾಂಕ್ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ ತಯಾರು ಮಾಡಿದ್ದರು. ಬಳಿಕ ಬ್ಯಾಂಕ್ಗೆ ಕಳುಹಿಸಿಸಿ ಹಣ ರಿಲೀಸ್ ಮಾಡುವಂತೆ ಹೇಳುತ್ತಿದ್ದರು.
ಬ್ಯಾಂಕ್ನ ಸಿಬ್ಬಂದಿ ಪರಿಶೀಲನೆ ನಡೆಸಲು ಕರೆ ಮಾಡಿದಾಗಲೂ ಇವರು ಸುಳ್ಳು ಮಾಹಿತಿ ನೀಡುತ್ತಿದ್ದರು. ಇದೇ ರೀತಿ ಒಟ್ಟು 18 ನಕಲಿ ಕೋರ್ಟ್ ಆದೇಶಗಳನ್ನು ಆರೋಪಿಗಳು ಬ್ಯಾಂಕ್ಗೆ ನೀಡಿದ್ದಾರೆ. ನಕಲಿ ಆದೇಶಗಳ ಮೂಲಕ 1.23 ಕೋಟಿ ರೂ. ವಂಚಿಸಿದ್ದಾರೆ. ತನಿಖೆ ವೇಳೆ ಪೊಲೀಸರು 62 ಲಕ್ಷ ರೂ. ಹಣವನ್ನು ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿದ್ದಾರೆ