ಬೆಂಗಳೂರು: “ಜಾತಿ ಗಣತಿ ವರದಿ ವಿಚಾರದಲ್ಲಿ ಸರ್ಕಾರ ಆತುರವಾಗಿ ತೀರ್ಮಾನ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ರಾಶಿಯವರ ಶುಭ ಮಂಗಳ ಕಾರ್ಯಕ್ಕೆ ಬಂಧುಗಳಿಂದ ತಡೆ: ಶನಿವಾರದ ರಾಶಿ ಭವಿಷ್ಯ 12 ಏಪ್ರಿಲ್ 2025!
ವಿಧಾನಸೌಧ ಆವರಣದಲ್ಲಿ ಮಾತನಾಡಿದ ಡಿಕೆಶಿ, ಜಾತಿ ಗಣತಿ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿರುವ ಬಗ್ಗೆ ಕೇಳಿದಾಗ, “ಕಾನೂನು ಸಚಿವರು ವರದಿ ತೆರೆದಿದ್ದು, ಯಾವುದೇ ಶಾಸಕರು ಹಾಗೂ ಸಚಿವರು ಇದನ್ನು ನೋಡಿಲ್ಲ. ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಚಿವರ ವಿರೋಧದ ಬಗ್ಗೆ ಕೇಳಿದಾಗ, “ಜಾತಿ ಗಣತಿ ವಿಚಾರವಾಗಿ ಯಾವುದೇ ಸಚಿವರ ವಿರೋಧವಿಲ್ಲ. ಯಾರೂ ಇದನ್ನು ಕಣ್ಣುಬಿಟ್ಟು ನೋಡಿಲ್ಲ” ಎಂದು ಹೇಳಿದರು.