ಬೀದರ್:- ಬೀದರ್ ನಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ ಆಗಿದ್ದು, ಗೋಪ್ರಿಯರು ಆತಂಕ ಹೆಚ್ಚಿಸಿದೆ.
ಜಾತಿ ಗಣತಿ ವಿಚಾರ: ಇದರಲ್ಲಿ ಆತುರದ ನಿರ್ಧಾರವಿಲ್ಲ ಎಂದ DCM ಡಿ.ಕೆ. ಶಿವಕುಮಾರ್!
ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. 2ನೇ ಗಣತಿಯ ಆಧಾರದಲ್ಲಿ ಶೇ.25ರಷ್ಟು ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು ಆಘಾತ ಮೂಡಿಸಿದೆ. ಪಶುಸಂಗೋಪನೆ ಇಲಾಖೆಯಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರುಗಳ ಗಣತಿ ನಡೆಯುತ್ತದೆ. 2019ರಲ್ಲಿ ನಡೆದಿದ್ದ 2ನೇ ಗಣತಿಯ ಅಂಕಿ-ಅಂಶಗಳ ಪ್ರಕಾರ ಬೀದರ 5,88,784 ಜಾನುವಾರುಗಳಿದ್ದವು. ಈಗ 2024ರ ವರ್ಷಾಂತ್ಯಕ್ಕೆ ಕೈಗೊಂಡಿದ್ದ 2ನೇ ಗಣತಿಯ ಮಾಹಿತಿ ಹೊರಬಿದ್ದಿದ್ದು ಈ ಅವಧಿಯಲ್ಲಿ ಮೂಕ ಪ್ರಾಣಿಗಳ ಸಂಖ್ಯೆ ಅಂದಾಜು ಒಂದೂವರೆ ಲಕ್ಷದಷ್ಟು ಕುಸಿತ ಕಂಡಿದೆ.
834 ಗ್ರಾಮಗಳಲ್ಲಿ 3,62,501 ಕುಟುಂಬಗಳ ಗಣತಿ ಕಾರ್ಯವನ್ನು ಪಶುಸಂಗೋಪನೆ ಇಲಾಖೆ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದೆ. ಪ್ರಸಕ್ತ ಗಣತಿಯಂತೆ ಜಿಲ್ಲೆಯಲ್ಲಿ 4,25,480 ಒಟ್ಟು ಜಾನುವಾರುಗಳಿವೆ. ಇನ್ನು ರೈತರು ಉಳುಮೆ, ಬಿತ್ತನೆ ಕಾರ್ಯಕ್ಕೆ ಹೆಚ್ಚು ಹೆಚ್ಚು ಯಂತ್ರಗಳ ಮೊರೆ ಹೋದ ಪರಿಣಾದಿಂದಾಗಿ ರೈತರು ಜಾನುವಾರುಗಳನ್ನ ಸಾಕುವುದು ಕಡಿಮೆ ಮಾಡಿದ್ದಾರೆ. ಹೀಗಾಗಿ, ದಿನದಿಂದದಿನಕ್ಕೆ ಜಾನುವಾರು ಸಂಖ್ಯೆಯಲ್ಲಿ ಇಳಿಕೆಯಾಗುತ್ತಿ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಹೇಳಿಕೆ ನೀಡಿದ್ದಾರೆ.