ಉತ್ತರ ಪ್ರದೇಶ:- ಸಿಡಿಲು ಸಹಿತ ಭಾರೀ ಆಲಿಕಲ್ಲು ಮಳೆಗೆ 15 ಜಿಲ್ಲೆಗಳಲ್ಲಿ 22 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.
ಇಲ್ಲಿ ಕೇಳಿ ಜನರೇ: ಚಿನ್ನದ ಉಂಗುರವನ್ನು ಅಪ್ಪಿತಪ್ಪಿಯೂ ಈ ಬೆರಳಿಗೆ ಧರಿಸಲೇಬಾರದು!
ಫತೇಪುರ್, ಅಜಂಗಢ ಜಿಲ್ಲೆಗಳಲ್ಲಿ ತಲಾ ಮೂವರು, ಫಿರೋಜಾಬಾದ್, ಕಾನ್ಪುರ್ ದೇಹತ್ ಮತ್ತು ಸೀತಾಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು, ಗಾಜಿಪುರ, ಗೊಂಡಾ, ಅಮೇಥಿ, ಸಂತ ಕಬೀರ್ ನಗರ ಮತ್ತು ಸಿದ್ಧಾರ್ಥ್ ನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಮೊತ್ತವನ್ನು ತಕ್ಷಣ ವಿತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.