ಬೇಸಿಗೆ ಆರಂಭವಾಗಿದೆ. ಬಿಸಿಲಿನ ಝಳದಿಂದ ಪಾರಾಗಲು ಎಲ್ಲರೂ ಈಗ ತಂಪಿನ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ವೈಯಕ್ತಿಕ ಬಳಕೆಗೆ ಟೇಬಲ್ ಫ್ಯಾನ್ ಉತ್ತಮ ಆಯ್ಕೆಯಾಗಿದೆ, ಇದು ಕಡಿಮೆ ಶಕ್ತಿಯನ್ನು ಬಳಸುತ್ತದೆ ಮತ್ತು ಅಪಾರ ಪ್ರಮಾಣದ ಗಾಳಿಯನ್ನು ನೀಡುತ್ತದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.
ಕೆಲವರು ತಮ್ಮ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೆಲವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡುತ್ತಿದ್ದಾರೆ.
ಆದರೆ, ಇಂದಿನ ಶೆಖೆಗೆ ಈ ಫ್ಯಾನ್ ಏನೂ ನಾಟುವುದಿಲ್ಲ. ಕೆಲವೊಂದು ಬಾರಿ ಇದರಿಂದ ಬಿಸಿ ಗಾಳಿ ಕೂಡ ಬರಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಫ್ಯಾನ್‌ನ ಗಾಳಿಯನ್ನು AC ಯಷ್ಟು ತಂಪಾಗಿಸಬಹುದು ಎಂಬುದು ನಿಮಗೆ ಗೊತ್ತೇ?. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಬೇಸಿಗೆ ಕಾಲದಲ್ಲಿ ಸೀಲಿಂಗ್ ಫ್ಯಾನ್‌ಗಳಿಂದ ಬರುವ ಗಾಳಿಯು ಹೆಚ್ಚಾಗಿ ಬಿಸಿಯಾಗಿರುತ್ತದೆ. ಹೀಗಾಗಿ ಸಾಕಷ್ಟು ಮಂದಿ ಟೇಬಲ್ ಫ್ಯಾನ್‌ಗಳನ್ನು ಬಳಸಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಕೋಣೆಯೊಳಗಿನ ಬಿಸಿ ಗಾಳಿಯೇ ಟೇಬಲ್ ಫ್ಯಾನ್ನಲ್ಲಿಯೂ ಪರಿಚಲನೆಯಾಗುತ್ತಾ ಇರುತ್ತದೆ, ಇದರಿಂದ ಗಾಳಿಯು ಹೆಚ್ಚು ತಣ್ಣಗಿರುವುದಿಲ್ಲ. ಇದರ ಪರಿಣಾಮದಿಂದಾಗಿ ಬಿಸಿ ಗಾಳಿಯು ದೇಹವನ್ನು ಸ್ವಲ್ಪ ವೇಗವಾಗಿ ಮುಟ್ಟುತ್ತದೆ.
ಟೇಬಲ್ ಫ್ಯಾನ್ ಬಳಸುವ ಮುನ್ನ, ಸೂರ್ಯನ ಶಾಖ ನೇರವಾಗಿ ಕೋಣೆಯ ಗೋಡೆಗಳಿಗೆ ಬೀಳುತ್ತಿದ್ಯಾ? ಆ ಕೋಣೆ ಬೆಚ್ಚಗಿದ್ಯಾ? ಶಾಖವನ್ನು ಕೋಣೆಯ ಗೋಡೆಗಳಿಗೆ ಹೊಡೆಯುತ್ತಿದ್ಯಾ ಅಥವಾ ಆ ಕೋಣೆ ತಂಪಾಗಿದ್ಯಾ ಎಂದು ನೀವು ತಿಳಿದಿರಬೇಕು. ನೀವು ಗಮನಿಸಿರಬಹುದು ನೆಲಮಹಡಿಯಲ್ಲಿರುವ ಕೋಣೆ ತಂಪಾಗಿರುತ್ತದೆ ಮತ್ತು ಮೇಲಿನ ಮಹಡಿ ಅತ್ಯಂತ ಬಿಸಿಯಾಗಿರುತ್ತದೆ.
ಯಾರ ಮನೆಯ ಮೇಲೆ ನೇರ ಸೂರ್ಯನ ಬೆಳಕು ಬೀಳುತ್ತದೆಯೋ ಅವರು ತಮ್ಮ ಟೇಬಲ್ ಫ್ಯಾನ್‌ಗಳನ್ನು ಕಿಟಕಿಗೆ ಎದುರಾಗಿ ಇಡಬೇಕು ಎಂದು ಹೇಳಲಾಗುತ್ತಿದೆ. ಇದು ಕೋಣೆಯಲ್ಲಿರುವ ಬಿಸಿ ಗಾಳಿಯು ಹೊರಹೋಗಲು ಮತ್ತು ಹೊರಗಿನಿಂದ ತಂಪಾದ ಗಾಳಿಯು ಕೋಣೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಈ ಟ್ರಿಕ್ಸ್ ರಾತ್ರಿ ಹೊತ್ತು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ.
ನಿಮ್ಮ ಮನೆಯ ಸುತ್ತಲೂ ಗಿಡಗಳಿದ್ದರೆ ಇನ್ನೂ ಒಳ್ಳೆಯದು. ಏಕೆಂದರೆ ನಿಮ್ಮ ಟೇಬಲ್ ಫ್ಯಾನ್ನಿಂದ ಮನೆಯೊಳಗೆ ಇನ್ನಷ್ಟು ತಂಪಾದ ಗಾಳಿ ಬರುತ್ತದೆ. ಇದು ನಿಮ್ಮ ಮನೆಯನ್ನು ತುಂಬಾ ತಂಪಾಗಿರಿಸುತ್ತದೆ. ಆದರೆ, ಹೊರಗಿನಿಂದ ತಂಪಾದ ಗಾಳಿಯನ್ನು ಒಳಗೆ ಎಳೆಯಲು ನೀವು ಫ್ಯಾನ್ ಅನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬಹುದು.
ಕೆಪಾಸಿಟರ್‌ಗಳನ್ನು ಬದಲಾಯಿಸಿ:
ಹಳೆಯ ಅಥವಾ ಕೆಟ್ಟ ಕೆಪಾಸಿಟರ್ ಫ್ಯಾನ್ ನಿಧಾನವಾಗಲು ಕಾರಣವಾಗಬಹುದು. ಹೊಸ ಕೆಪಾಸಿಟರ್ ಅನ್ನು ಸ್ಥಾಪಿಸುವ ಮೂಲಕ ನೀವು ಫ್ಯಾನ್‌ನ ವೇಗವನ್ನು ಹೆಚ್ಚಿಸಬಹುದು. ಶೆಖೆ ಗಾಲದಲ್ಲಿ ಕೆಪಾಸಿಟರ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು.. ಹೀಗಾಗಿ ಕೆಪಾಸಿಟರ್ ಅನ್ನು ಚೆಕ್ ಮಾಡಿ, ಹಾಳಾಗಿದ್ದರೆ ಅಥವಾ ನಿಧಾನವಾಗಿ ಗಾಳಿ ಬರುತ್ತಿದ್ದರೆ ಬದಲಾಯಿಸಿ. ಹಾಗೆಯೆ ಫ್ಯಾನ್ ಅನ್ನು ನಿರಂತರವಾಗಿ ಚಾಲನೆಯಲ್ಲಿಡುವುದರಿಂದ ಹಲವು ಬಾರಿ ಫ್ಯಾನ್ ಬಿಸಿ ಗಾಳಿಯನ್ನು ನೀಡುತ್ತದೆ. ನಿರಂತರವಾಗಿ ಓಡುವುದರಿಂದ ಫ್ಯಾನ್ ಮೋಟಾರ್ ಬಿಸಿಯಾಗುತ್ತದೆ. ಇದಕ್ಕಾಗಿ, ಮಧ್ಯೆ ಸ್ವಲ್ಪ ಸಮಯದವರೆಗೆ ಫ್ಯಾನ್ ಅನ್ನು ಆಫ್ ಮಾಡುವುದನ್ನು ನೆನಪಿನಲ್ಲಿಡಿ.
ಒದ್ದೆಯಾದ ಟವಲ್ ಸಹಾಯ ಮಾಡುತ್ತದೆ:
ಬೇಸಿಗೆಯಲ್ಲಿ ಅನೇಕ ಜನರು ತಲೆಯ ಮೇಲೆ ಒದ್ದೆಯಾದ ಟವೆಲ್‌ಗಳನ್ನು ಹಾಕಿ ತಿರುಗಾಡುವುದನ್ನು ನೀವು ನೋಡಿರಬೇಕು. ಇದರಿಂದಾಗಿ ಸುತ್ತಲಿನ ಬಿಸಿ ಗಾಳಿಯು ತಂಪಾಗಿರುತ್ತದೆ. ಹಾಗೆಯೆ ಫ್ಯಾನ್‌ನ ಗಾಳಿಯನ್ನು ತಂಪಾಗಿಸಲು ಕೂಡ ನೀವು ಈ ತಂತ್ರವನ್ನು ಬಳಸಬಹುದು. ನೀವು ಯಾವುದಾದರು ಸಹಾಯದಿಂದ ಟೇಬಲ್ ಫ್ಯಾನ್ ಮುಂದೆ ಒದ್ದೆಯಾದ ಟವಲ್ ಅನ್ನು ನೇತು ಹಾಕಬಹುದು. ಆಗ ಗಾಳಿಯು ಹೆಚ್ಚಿನ ತಂಪನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಐಸ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಫ್ಯಾನ್ ಮುಂದೆ ಸ್ವಲ್ಪ ಐಸ್ ಇಡಬೇಕಾಗುತ್ತದೆ. ಈಗ ಅದರಿಂದ ಹೊರಬರುವ ಗಾಳಿಯು ತುಂಬಾ ತಂಪಾಗಿರುವುದನ್ನು ನೀವು ನೋಡುತ್ತೀರಿ.