ವಿಜಯಪುರ : ವಿಜಯಪುರ ನಗರ ಶಾಸಕ ಯತ್ನಾಳ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎನ್ನುವ ಆಡಿಯೋ ವೊಂದು ಭಾರೀ ವೈರಲ್ ಆಗಿತ್ತು. ಇದೀಗ ಆಡಿಯೋ ಬೆನ್ನಲ್ಲೆ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಜಯಪುರದ ಮತ್ತೊಬ್ಬ ಯುವಕ ವಿಡಿಯೋ ಹರಿಬಿಟ್ಟಿದ್ದಾನೆ.
ನಿನ್ನೆಯಷ್ಟೆ ಯತ್ನಾಳ್ ಹತ್ಯೆಗೆ ಸಂಚಿನ ಆಡಿಯೋ ವೈರಲ್ ಆಗಿ ಸಂಚಲನ ಮೂಡಿಸಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಯತ್ನಾಳ್ ವಿರುದ್ಧ ಹೋರಾಟಕ್ಕೆ ಸೇರಿ, ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೆ ಜುದಾ ಎಂದು ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಹರಿಬಿಟ್ಟಿದ್ದಾನೆ.
ಬಿಜಾಪುರ ಫೌಂಡೇಶನ್ ಹೆಸರಿನ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ನಮ್ಮ ಪ್ರವಾದಿಯನ್ನ ಟೀಕಿಸಿದನ್ನ ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಂರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ. ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧವಿದೆ. ವಿಡಿಯೋ ಕೊನೆಗೆ ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ ತಲೆ ಕತ್ತರಿಸೋದು ಎಂದು ಹೇಳಿದ್ದು, ಇದೀಗ ಭಾರೀ ಸುದ್ದಿಯಾಗುತ್ತಿದೆ.