ಹಿರಿಯ ನಟಿ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ 2017 ರ ಚಲನಚಿತ್ರ ಟಾಯ್ಲೆಟ್: ಏಕ್ ಪ್ರೇಮ್ ಕಥಾದ ಶೀರ್ಷಿಕೆಯ ಬಗ್ಗೆ ವಿಮರ್ಶಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಚಿತ್ರದ ಹೆಸರನ್ನು ಪ್ರಶ್ನಿಸುತ್ತಾ, “ಚಿತ್ರದ ಶೀರ್ಷಿಕೆಯನ್ನು ನೋಡಿ; ನಾನು ಎಂದಿಗೂ ಅಂತಹ ಹೆಸರಿನ ಚಿತ್ರವನ್ನು ನೋಡಲು ಹೋಗುವುದಿಲ್ಲ. ಯೇ, ಕೋಯಿ ನಾಮ್ ಹೈ? ಎಂದು ಹೇಳಿದ್ದರು.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಇನ್ನೂ ಈ ವಿಚಾರಕ್ಕೆ ಅಕ್ಷಯ್ ಕುಮಾರ್ ಸಿಟ್ಟಾಗಿದ್ದು, ‘ಅಂತಹ ಸಿನಿಮಾಗಳನ್ನು ಯಾರೋ ಟೀಕಿಸುತ್ತಾರೆ ಅಂತ ನನಗೆ ಅನಿಸಲ್ಲ. ಒಂದು ವೇಳೆ ಟೀಕೆ ಮಾಡಿದ್ದರೆ ಅವರು ಮೂರ್ಖರೇ ಆಗಿರಬೇಕು. ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ಲಿಫ್ಟ್, ಕೇಸರಿ, ಕೇಸರಿ 2 ರೀತಿಯ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ.
ಇಂಥ ಸಿನಿಮಾಗಳನ್ನು ಟೀಕಿಸುವವರು ಖಂಡಿತಾ ಮೂರ್ಖರು. ಹೃದಯಪೂರ್ವಕವಾಗಿ ನಾನು ಆ ಸಿನಿಮಾಗಳನ್ನು ಮಾಡಿದ್ದೇನೆ. ಆ ಸಿನಿಮಾಗಳು ಜನರಿಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತವೆ’ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ.