ನವದೆಹಲಿ: ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ವಿಶಾಲ್ ಫ್ಯೂರಿಯಾ ನಿರ್ದೇಶನದ ಹಾರರ್ ಚಿತ್ರ ಚೋರಿ 2 ರಲ್ಲಿ ತಮ್ಮ “ಪವರ್ ಹೌಸ್” ಅಭಿನಯಕ್ಕಾಗಿ ಪ್ರಶಂಸೆಯಲ್ಲಿ ಮುಳುಗಿದ್ದಾರೆ, ಈ ಚಿತ್ರವು ಪ್ರಸ್ತುತ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಇನ್ನೂ ಇನ್ಸ್ಟಾಗ್ರಾಮ್ನಲ್ಲಿ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಅವರು, 2023 ರಲ್ಲಿ ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದ ತಮಗೆ ಮತ್ತು ಇತರ ಭಾರತೀಯ ನಾಗರಿಕರಿಗೆ ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನುಶ್ರತ್ ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ನನ್ನನ್ನು ಸೇರಿ ಇನ್ನುಳಿದ ಭಾರತೀಯರನ್ನು ಕರೆತರಲು ನಿಮ್ಮ ತಂಡ ಮತ್ತು ಸರ್ಕಾರ ಕೈಗೊಂಡ ಕ್ರಮಕ್ಕಾಗಿ ಧನ್ಯವಾದಗಳು. ಮೋದಿಜೀ ಅವರೇ ನಿಮಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ನನಗೆ ಅದ್ಭುತ ಸೌಭಾಗ್ಯ ಸಿಕ್ಕಿದೆ. ನಿಮ್ಮನ್ನು ಭೇಟಿಯಾಗಿ ಧನ್ಯಳಾಗಿದ್ದೇನೆ. ಇದನ್ನೂ ಜೀವನ ಪೂರ್ತಿ ಸ್ಮರಿಸುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ.
2023ರಲ್ಲಿ ಕಾರ್ಯಕ್ರಮವೊಂದಕ್ಕಾಗಿ ನಟಿ ನುಶ್ರತ್ ಇಸ್ರೇಲ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಅನ್ನು ಟಾರ್ಗೆಟ್ ಮಾಡಿದ್ದರು. ಇಸ್ರೇಲ್ ಮತ್ತು ಉಗ್ರರ ಯುದ್ಧದ ಕಾರಣದಿಂದ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆಗ ನಟಿ ಕೂಡ ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದರು. ಭಾರತದ ಶ್ರಮದ ಫಲವಾಗಿ ಸುರಕ್ಷಿತವಾಗಿ ಅವರು ತಾಯ್ನಾಡು ಭಾರತಕ್ಕೆ ಮರಳಿದ್ದರು.