ಬೆಂಗಳೂರು: ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರು ಅಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರು ಅಲ್ಲ. ನಾವು ನಂದಿನ ಹಾಲಿನ ರಾಜ್ಯದವರು. ಏಪ್ರಿಲ್ 17ಕ್ಕೆ ಜಾತಿಗಣತಿ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನೀವು ಸ್ವಿಮಿಂಗ್ ಮಾಡುತ್ತೀರಾ..? ಹಾಗಾದ್ರೆ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ..!
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಏರಿಕೆ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ದತ್ತಾಂಶ ಇಲ್ಲ ಎಂದು ಹೇಳಿ ಆಗ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಜಡ್ಜ್ಮೆಂಟ್ ಕೊಟ್ಟಿಲ್ಲ. 50% ಮೀಸಲಾತಿ ದಾಟುವಂತಿಲ್ಲ ಅನ್ನೋದು ಡೈರೆಕ್ಷನ್ ಅಷ್ಟೇ ಎಂದು ಹೇಳಿದರು.