ಜೈಪೂರ್ನ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳೆ ತನ್ನ 6ನೇ ಪಂದ್ಯ ಆಡಲು ಸಜ್ಜಾಗಿದೆ.
Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ!
ಈಗಾಗಲೇ ಐದು ಪಂದ್ಯಗಳನ್ನು ಆಡಿರುವ ಬೆಂಗಳೂರು ಪಡೆ 3ರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿದೆ. ಅದರಲ್ಲೂ ಬುಧವಾರ ನಡೆದಿದ್ದ ತವರು ಮೈದಾನದಲ್ಲಿ ಡೆಲ್ಲಿ ವಿರುದ್ಧ ಸೋಲನ್ನು ಕಂಡಿರುವ ಆರ್ಸಿಬಿ ಇದೀಗ ರಾಜಸ್ಥಾನ ಮಣಿಸಿ ಮೂರನೇ ಸ್ಥಾನಕ್ಕೆರಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.
ನಾಳೆಯ ಪಂದ್ಯಕ್ಕಾಗಿ ಆರ್ಸಿಬಿ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಸತತ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿರುವ ಸ್ಟಾರ್ ಆಟಗಾರನನ್ನು ಈ ಪಂದ್ಯದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಲಿವಿಂಗ್ಸ್ಟೋನ್ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದ್ದರು.
ಬುಧವಾರ ತವರು ಮೈದಾನದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಾದರೂ ತಂಡಕ್ಕೆ ಆಸರೆ ಆಗುತ್ತಾರೆ ಎಂದುಕೊಂಡಿದ್ದ ಫ್ಯಾನ್ಸ್ಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಕೈ ಹಿಡಿಯದ ಲಿವಿಂಗ್ಸ್ಟೋನ್ 6 ಎಸೆತಗಳನ್ನು ಆಡಿ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯಿವುದರ ಜೊತೆಗೆ ಸೋಲು ಕಂಡಿತು.
ಇದೀಗ ಮುಂದಿನ ಪಂದ್ಯಕ್ಕೆ ಲಿವಿಂಗ್ಸ್ಟೋನ್ ಅವರನ್ನು ಹೊರಗಿಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಜೇಕಬ್ ಬೆಥೆಲ್ ಅವರನ್ನು ಆಡಿಸುವು ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.