Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಗುಜರಾತ್ ವಿರುದ್ಧ ರೋಚಕ ಜಯ ಸಾಧಿಸಿದ ಲಕ್ನೋ!

    By AIN AuthorApril 12, 2025
    Share
    Facebook Twitter LinkedIn Pinterest Email
    Demo

    ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಗುಜರಾತ್ ಗೆ ಲಕ್ನೋ ಶಾಕ್ ಕೊಟ್ಟಿದ್ದು, GT ವಿರುದ್ಧ ಲಕ್ನೋ ಜಯ ಸಾಧಿಸಿದೆ. ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಅವರ ಅರ್ಧಶತಕಗಳ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅರ್ಧಶತಕ ಸಿಡಿಸಿ ತಂಡವನ್ನು 20 ಓವರ್‌ಗಳಲ್ಲಿ 180 ರನ್​ಗಳಿಗೆ ಕೊಂಡೊಯ್ದರು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 19.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.

    ಗೋಲ್ಡ್ ಪ್ರಿಯರಿಗೆ ಶಾಕಿಂಗ್ ಮ್ಯಾಟರ್: ಚಿನ್ನದ ಬೆಲೆ ದಿಢೀರ್ ಏರಿಕೆ!

    ಪಂದ್ಯದಲ್ಲಿ ಗುಜರಾತ್ ತಂಡ ಲಕ್ನೋ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತ್ತು. ಈ ಮೊತ್ತವನ್ನ ಲಖನೌ ಸೂಪರ್ ಜೈಂಟ್ಸ್ 19.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

    ಟಾಸ್ ಗೆದ್ದ ಲಕ್ನೋ ಕ್ಯಾಪ್ಟನ್​ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿ ಗುಜರಾತ್​ ತಂಡದವರನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಗುಜರಾತ್ ಪರ ನಾಯಕ ಶುಭ್​ಮನ್​ ಗಿಲ್​ ಹಾಗೂ ಸಾಯಿ ಸುದರ್ಶನ್​ ಅತ್ಯದ್ಭುತ ಇನ್ನಿಂಗ್ಸ್​ ಕಟ್ಟಿದರು.

    ಇದರಿಂದ ತಂಡದ ಮೊತ್ತ 120 ಆಗಿದ್ದಾಗ ಗಿಲ್​ ಹಾಫ್​​ ಸೆಂಚುರಿ ಸಿಡಿಸಿದ ಬಳಿಕ ಪೂರನ್​ಗೆ ಕ್ಯಾಚ್ ಕೊಟ್ಟರು. ನಾಯಕನ ಬೆನ್ನಲ್ಲೇ ಸುದರ್ಶನ್​ ಕೂಡ 60 ರನ್​ ಗಳಿಸಿ ಆಡುವಾಗ ಆವೇಶ್​ಖಾನ್​ ಬೌಲಿಂಗ್​ನಲ್ಲಿ ಔಟ್​ ಆಗಿ ನಡೆದರು. ಜೋಶ್​ ಬಟ್ಲರ್​ 16, ಸುಂದರ್ 2 ಬೇಗನೇ ಕ್ರೀಸ್​ ಖಾಲಿ ಮಾಡಿದರು. ಶೆರ್ಫೇನ್ ರುದರ್ಫೋರ್ಡ್ 22 ಹಾಗೂ ಶಾರುಖ್​ ಖಾನ್ ಅವರ 11 ರನ್​ಗಳಿಂದ ಗುಜರಾತ್ ತಂಡ 181 ರನ್​ಗಳ ಗುರಿಯನ್ನ ಲಕ್ನೋಗೆ ನೀಡಿತ್ತು.

    ತವರಲ್ಲಿ ಈ ಟಾರ್ಗೆಟ್​ ಚೇಸ್ ಮಾಡಲು ಶುರು ಮಾಡಿದ ಲಕ್ನೋ ಆರಂಭದಲ್ಲೇ ಬಲಿಷ್ಠ ಬ್ಯಾಟಿಂಗ್ ಮಾಡಿತು. ತಂಡದ ಮೊತ್ತ 65 ಆಗಿದ್ದಾಗ ಕ್ಯಾಪ್ಟನ್​ ಪಂತ್, ಸುಂದರ್​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಮಿಚೆಲ್​ ಮಾರ್ಷ್​ ಅನುಪಸ್ಥಿತಿಯಲ್ಲಿ ಪಂತ್ ಆರಂಭಿಕರಾಗಿ ಕಣಕ್ಕೆ ಇಳಿದು ಬ್ಯಾಟಿಂಗ್​ನಲ್ಲಿ ಕೊಂಚ ಸುಧಾರಣೆ ಕಂಡರು. ಪಂತ್ ಬಳಿಕ ಕ್ರೀಸ್​ಗೆ ನಿಕೋಲಸ್​ ಪೂರನ್​ ಆಗಮಿಸಿದರು.

    ಆದರೆ ಪಂತ್ ಜೊತೆ ಓಪನರ್​ ಆಗಿ ಬಂದಿದ್ದ ಮಾರ್ಕ್ರಾಮ್ ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ್ದರು. ಹೀಗಾಗಿಯೇ 31 ಎಸೆತದಲ್ಲಿ ಮಾರ್ಕ್ರಾಮ್ 9 ಬೌಂಡರಿ, 1 ಸಿಕ್ಸರ್​ನಿಂದ ಭರ್ಜರಿ ಅರ್ಧಶತಕ ಸಿಡಿಸಿ ಬ್ಯಾಟ್​ ಮೇಲೆತ್ತಿದರು. 58 ರನ್​ಗಳಿಸಿ ಆಡುವಾಗ ಗಿಲ್​ಗೆ ಕ್ಯಾಚ್ ಕೊಟ್ಟು ನಡೆದರು. ಒಬ್ಬರು ಹೋದರು ಎನ್ನುವಷ್ಟರಲ್ಲಿ ಹೊಡಿಬಡಿ ಬ್ಯಾಟಿಂಗ್ ಅನ್ನು ಪೂರನ್ ಆಗಲೇ ಆರಂಭಿಸಿದ್ದರು

    ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿರುವ ನಿಕೋಲಸ್ ಪೂರನ್ ಕೇವಲ 24 ಎಸೆತಗಳಲ್ಲಿ 1 ಫೋರ್ 6 ಸಿಕ್ಸರ್ ಸಮೇತ ಅದ್ಭುತವಾದ ಅರ್ಧಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಇದು ಪೂರನ್ ಅವರ 4ನೇ ಅರ್ಧಶತಕವಾಗಿದೆ. 61 ರನ್​ ಗಳಿಸಿರುವಾಗ ರಶೀದ್​ ಖಾನ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿ ಬೇಸರದಲ್ಲೇ ಹೆಜ್ಜೆ ಹಾಕಿದರು. ಬಳಿಕ ಬ್ಯಾಟಿಂಗ್​ಗೆ ಬಂದ ಆಯುಷ್​ ಬದೋನಿ ತಂಡ ಗೆಲ್ಲುವವರೆಗೆ ತಾಳ್ಮೆಯ ಆಟ ಆಡಿದರು. ಆಯುಷ್​ ಬದೋನಿ 20 ಎಸೆತಕ್ಕೆ 28 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 19.3 ಓವರ್​ನಲ್ಲಿ ಲಕ್ನೋ ತಂಡ 4 ವಿಕೆಟ್​ಗೆ 186 ರನ್​ ಗಳಿಸುವ ಮೂಲಕ ವಿಜಯ ಸಾಧಿಸಿತು.

    Demo
    Share. Facebook Twitter LinkedIn Email WhatsApp

    Related Posts

    ಆರ್ ಸಿಬಿ ವೇಗಿ ವಿರುದ್ಧ ಕೇಳಿಬಂತು ಗಂಭೀರ ಆರೋಪ: ದೈಹಿಕ ಕಿರುಕುಳದ ದೂರುಕೊಟ್ಟ ಮಹಿಳೆ!

    June 28, 2025

    Praggnanandhaa: ವಿಶ್ವದ ನಂ. 4 ಸ್ಥಾನ ಅಲಂಕರಿಸಿದ ಭಾರತದ ಚದುರಂಗ ಚತುರ ಆರ್ ಪ್ರಜ್ಞಾನಂದ!

    June 28, 2025

    IND vs ENG: ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭ..!

    June 28, 2025

    Australia vs West Indies: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ..!

    June 28, 2025

    ಸೂರ್ಯಕುಮಾರ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಆಡುವುದು ಅನುಮಾನ!

    June 27, 2025

    Shikhar Dhawan: ಹೋಟೆಲ್ ರೂಂಗೆ ಗರ್ಲ್’ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಮುಂದೇನಾಯ್ತು..?

    June 27, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025

    IND vs ENG: ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ: ಬುಮ್ರಾ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು..?

    June 26, 2025

    Esha Gupta: ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಬಾಲಿವುಡ್ ನಟಿ ಹೇಳಿದ್ದೇನು..?

    June 25, 2025

    IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್’ನಲ್ಲಿ ಸೋಲು ಕಂಡ ಟೀಂ ಇಂಡಿಯಾ..!

    June 25, 2025

    ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಮದುವೆ ಮುಂದೂಡಿಕೆ!

    June 25, 2025

    India Vs England: ಅಂಪೈರ್ ಮೇಲಿನ ಕೋಪಕ್ಕೆ ಚೆಂಡೆಸೆದ ರಿಷಬ್ ಪಂತ್’ಗೆ ದಂಡ..!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.