ಬೆಂಗಳೂರು:- ನಗರದ ಕರಗ ಉತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಕರಗ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಧರ್ಮರಾಯ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
Turmeric Benefits: ಅರಿಶಿನದಿಂದ ಸಿಗುವ ಬೆನಿಫಿಟ್ ಬಗ್ಗೆ ನಿಮಗೆಷ್ಟು ಗೊತ್ತಾ!?
ಈ ಬಗ್ಗೆ ಮಾತನಾಡಿದ ಅವರು, ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ. ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ. ನಾನೇ ಬಂದು ಎಲ್ಲ ವ್ಯವಸ್ಥೆ ನೋಡಿದ್ದೀನಿ. ಬಹಳ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಕೂಡ ಕರಗದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕರಗ ಅಂದ್ರೆ ಬಹಳ ಫೇಮಸ್. ಪುಟ್ಟ ನಗರವಾದಾಗಿನಿಂದಲೂ ಕರಗ ನಡೀತಾ ಬರ್ತಾ ಇದೆ. ಲಕ್ಷಾಂತರ ಜನರು ಕರಗ ನೋಡಲು ಬರ್ತಾರೆ. ಶಾಸಕರು, ಪೊಲೀಸ್, ಬಿಬಿಎಂಪಿ ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಹಣ ಬಿಡುಗಡೆ ಗೊಂದಲ ವಿಚಾರವಾಗಿ ಮಾತನಾಡಿ, ಸಮಿತಿ ಅವಧಿ ಮುಗಿದಿದೆ. ಸಮಿತಿ ಅಧ್ಯಕ್ಷರು ಕೋರ್ಟ್ಗೆ ಹೋಗಿ ಪರ್ಮಿಷನ್ ತಂದಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಅವರಿಗೆ ಹಣ ಕಳಿಸುವಂತಿರಲಿಲ್ಲ. ಹೀಗಾಗಿ, ಎಡಿಸಿ ಜಗದೀಶ್ ನಾಯ್ಕ್ಗೆ ಖಾತೆಗೆ ಹಣ ಹಾಕಿದ್ದೀವಿ. ಕೋರ್ಟ್ ಆದೇಶದ ಪ್ರಕಾರವೇ ಮಾಡಿದ್ದೇವೆ ಎಂದರು.