ಬೆಂಗಳೂರು:-ರಾಜ್ಯ ಸರ್ಕಾರ ನಡೆಸಿರುವ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 ವರದಿಯ ಮತ್ತಷ್ಟು ಅಂಶಗಳು ಬಯಲಿಗೆ ಬಂದಿವೆ. ಅದರಂತೆ, ಪ್ರವರ್ಗ 1ಎ, 1ಬಿ, 2ಎ, 2ಬಿ, 3ಎ, 3ಬಿ ಗಳಲ್ಲಿ ಎಷ್ಟೆಷ್ಟು ಜನಸಂಖ್ಯೆಯಿದೆ ಎಂಬುದರ ವರದಿ ಸಿಕ್ಕಿದೆ. ಅದರಂತೆ, ಸಾಮಾನ್ಯ ವರ್ಗದ ಜನಸಂಖ್ಯೆ ಎಷ್ಟಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಎಷ್ಟಿದೆ ಎಂಬ ಅಂಕಿ-ಅಂಶಗಳೂ ಲಭ್ಯವಾಗಿವೆ.
ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!
ಎಸ್, ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ಅಂಕಿಅಂಶ ಬಹಿರಂಗವಾಗಿದ್ದು, ಕರ್ನಾಟಕದಲ್ಲಿ ಯಾವ ಜಾತಿ ಜನಸಂಖ್ಯೆ ಎಷ್ಟಿದೆ? ಜಾತಿಗಣತಿ ವರದಿಯಲ್ಲಿ ನೀಡಿರುವ ಕೆಲವು ಮಹತ್ವದ ಶಿಫಾರಸುಗಳ ಬಗ್ಗೆ ಮಾಹಿತಿ ದೊರೆತಿದೆ.
ಜಾತಿಗಣತಿ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಜನರಲ್ಲಿ ಈಗ ಕುತೂಹಲ ಹೆಚ್ಚಾಗಿದೆ. ವರದಿಯ ಅಂಕಿಅಂಶಗಳು ಲಭ್ಯವಾಗಿದ್ದು, ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆ ಪ್ರಮಾಣದ ಬಗ್ಗೆ ವಿವರ ಇಲ್ಲಿದೆ.
ಪ್ರವರ್ಗ 1ಎನಲ್ಲಿ ಯಾವ ಜಾತಿ?
ಗಂಗಾಮತ, ಗೊಲ್ಲ, ಉಪ್ಪಾರ, ಮೊಗವೀರ, ಕೋಲಿ, ಇತರೆ
ಪ್ರವರ್ಗ 1ಬಿನಲ್ಲಿ ಯಾವ ಜಾತಿ?
ಕುರುಬ, ಇತರೆ
ಪ್ರವರ್ಗ 2ಎರಲ್ಲಿ ಯಾವ ಜಾತಿ?
ಮಡಿವಾಳ, ಈಡಿಗ, ಇತರೆ
ಜಾತಿಗಣತಿ: ಎಸ್‌ಸಿ
ಜನಸಂಖ್ಯೆ – 1,09,29,347
ಮೀಸಲಾತಿ – 24.1%
ಶಿಫಾರಸು – 24.1%
ಜಾತಿಗಣತಿ: ಎಸ್‌ಟಿ
ಜನಸಂಖ್ಯೆ – 42,81,289
ಮೀಸಲಾತಿ – 9.95%
ಶಿಫಾರಸು – 9.95%
ಜಾತಿಗಣತಿ: ಪ್ರವರ್ಗ 1ಎ
ಜನಸಂಖ್ಯೆ – 34,96,638 (8.40%)
ಮೀಸಲಾತಿ – 4%
ಶಿಫಾರಸು – 6%
ಜಾತಿಗಣತಿ: ಪ್ರವರ್ಗ 1ಬಿ (ಹೊಸ ಸೃಷ್ಟಿ)
ಜನಸಂಖ್ಯೆ – 73,92,313 (17.74%)
ಮೀಸಲಾತಿ – –
ಶಿಫಾರಸು – 12
ಜಾತಿಗಣತಿ: ಪ್ರವರ್ಗ 2ಎ
ಜನಸಂಖ್ಯೆ – 77,78,209 (18.70%)
ಮೀಸಲಾತಿ – 15%
ಶಿಫಾರಸು – 10%
ಜಾತಿಗಣತಿ: ಪ್ರವರ್ಗ 2ಬಿ (ಮುಸ್ಲಿಂ)
ಜನಸಂಖ್ಯೆ – 75,25,880 (18.08%)
ಮೀಸಲಾತಿ – 04%
ಶಿಫಾರಸು – 08%
ಜಾತಿಗಣತಿ: ಪ್ರವರ್ಗ 3ಎ (ಒಕ್ಕಲಿಗ)
ಜನಸಂಖ್ಯೆ – 72,99,577 (17.53%)
ಮೀಸಲಾತಿ – 04%
ಶಿಫಾರಸು – 07%
ಜಾತಿಗಣತಿ: ಪ್ರವರ್ಗ 3ಬಿ (ಲಿಂಗಾಯತ)
ಜನಸಂಖ್ಯೆ – 81,37,536 (19.55%)
ಮೀಸಲಾತಿ – 05%
ಶಿಫಾರಸು – 08%
ಜಾತಿಗಣತಿ: ಒಟ್ಟು ಮೀಸಲಾತಿ
ಪ್ರಸ್ತುತ – 66%
ಶಿಫಾರಸು – 85.1% (+19.1%)
ಜಾತಿಗಣತಿ ಲೆಕ್ಕ
ಓಬಿಸಿ ಜನಸಂಖ್ಯೆ – 4.18 ಕೋಟಿ
ಎಸ್‌ಸಿ ಜನಸಂಖ್ಯೆ – 1,09,29,347
ಎಸ್‌ಟಿ ಜನಸಂಖ್ಯೆ – 42,81,289
ಸಾಮಾನ್ಯ ವರ್ಗದ ಜನಸಂಖ್ಯೆ – 29,74,153
ಸರ್ವೇಗೆ ಒಳಪಟ್ಟ ಜನಸಂಖ್ಯೆ- 5,98,14,942