Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪಂಜಾಬ್ ಕಿಂಗ್ಸ್ ವಿರುದ್ಧ ರನ್‌ಗಳ ‘ಅಭಿಷೇಕ’: IPL ಇತಿಹಾಸದ 2ನೇ ಅತ್ಯಧಿಕ ಚೇಸಿಂಗ್ ಮಾಡಿ ಗೆದ್ದ ಹೈದರಾಬಾದ್!

    By AIN AuthorApril 13, 2025
    Share
    Facebook Twitter LinkedIn Pinterest Email
    Demo

    ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 2025 ರ 27ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಿತು.

    ಭಾರೀ ಅಗ್ನಿ ಅವಘಡ: ಬೆಂಗಳೂರಲ್ಲಿ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಗೆ ಆಹುತಿ!

    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಆರಂಭಿಕ ಅಭಿಷೇಕ್ ಶರ್ಮಾ ಅವರ ದಾಖಲೆಯ ಐಪಿಎಲ್ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಈ ಸೀಸನ್​ನ ಎರಡನೇ ಗೆಲುವು ದಾಖಲಿಸಿತು.

    ಪಂಜಾಬ್ ವಿರುದ್ಧದ ಪಂದ್ಯದದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 246 ರನ್​ಗಳ ಬೃಹತ್​ ಗುರಿ ಬೆನ್ನಟ್ಟುವ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ 2ನೇ ವೇಗದ ಶತಕ ಸಿಡಿಸಿದರು.

    ಬೃಹತ್​ ಗುರಿ ಮುಂದಿದ್ದರಿಂದ ಆರಂಭದಿಂದಲೇ ಸಿಡಿಲಬ್ಬರದ ಆಟಕ್ಕೆ ಮುಂದಾದರು. ತಮಗೆ ಸಿಕ್ಕ ಜೀವದಾನಗಳನ್ನ ಸದುಪಯೋಗ ಪಡಿಸಿಕೊಂಡ ಅಭಿಷೇಕ್ ಶರ್ಮಾ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದರು. ಅವರ ಶತಕದ ಇನ್ನಿಂಗ್ಸ್​ನಲ್ಲಿ ಆರು ಸಿಕ್ಸರ್‌ಗಳು ಮತ್ತು 11 ಬೌಂಡರಿಗಳಿದ್ದವು.

    ಸತತ 4 ಪಂದ್ಯಗಳಲ್ಲಿ ಸೋಲು ಕಂಡಿದ್ದ ಹೈದರಾಬಾದ್ ಇಂದ ಬೌಲಿಂಗ್​​ನಲ್ಲಿ ನೀರಸ ಪ್ರದರ್ಶನ ತೋರಿತ್ತು. 245 ರನ್​ಗಳನ್ನ ಬಿಟ್ಟುಕೊಟ್ಟಿದ್ದರಿಂದ ಈ ಪಂದ್ಯದಲ್ಲೂ ಸೋಲಹುದು ಎಂಬ ಭಾವನೆ ಹುಟ್ಟಿಸಿತ್ತು. ಆದರೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟ್​ಗೆ 171 ರನ್​ ಸೇರಿಸಿದರು.

    ಈ ಶತಕದ ಮೂಲಕ ಅಭಿಷೇಕ್ ಹೈದರಾಬಾದ್ ಪರ ವೇಗದ ಶತಕ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅಭಿಷೇಕ್ 40 ಎಸೆತಗಳಲ್ಲಿ ಶತಕ ಸಿಡಿಸಿದರೆ, ಟ್ರಾವಿಸ್ ಹೆಡ್ ಕಳೆದ ವರ್ಷ 39 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

    ಇನ್ನು ಭಾರತೀಯರ ಪರ ಇದು 3ನೇ ವೇಗದ ಶತಕವಾಗಿದೆ. ಯುಸುಫ್ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದರೆ, ಇದೇ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು

    ಈ ಪಂದ್ಯದಲ್ಲಿ ಒಟ್ಟಾರೆ 141 ರನ್​ಗಳಿಸಿದ ಅಭಿಷೇಕ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು

    Demo
    Share. Facebook Twitter LinkedIn Email WhatsApp

    Related Posts

    Praggnanandhaa: ವಿಶ್ವದ ನಂ. 4 ಸ್ಥಾನ ಅಲಂಕರಿಸಿದ ಭಾರತದ ಚದುರಂಗ ಚತುರ ಆರ್ ಪ್ರಜ್ಞಾನಂದ!

    June 28, 2025

    IND vs ENG: ಇಂದಿನಿಂದ ಭಾರತ- ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭ..!

    June 28, 2025

    Australia vs West Indies: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ..!

    June 28, 2025

    ಸೂರ್ಯಕುಮಾರ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಆಡುವುದು ಅನುಮಾನ!

    June 27, 2025

    Shikhar Dhawan: ಹೋಟೆಲ್ ರೂಂಗೆ ಗರ್ಲ್’ಫ್ರೆಂಡ್ ಕರೆದೊಯ್ದಿದ್ದ ಶಿಖರ್ ಧವನ್! ಮುಂದೇನಾಯ್ತು..?

    June 27, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025

    IND vs ENG: ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ: ಬುಮ್ರಾ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು..?

    June 26, 2025

    Esha Gupta: ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಬಾಲಿವುಡ್ ನಟಿ ಹೇಳಿದ್ದೇನು..?

    June 25, 2025

    IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್’ನಲ್ಲಿ ಸೋಲು ಕಂಡ ಟೀಂ ಇಂಡಿಯಾ..!

    June 25, 2025

    ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಮದುವೆ ಮುಂದೂಡಿಕೆ!

    June 25, 2025

    India Vs England: ಅಂಪೈರ್ ಮೇಲಿನ ಕೋಪಕ್ಕೆ ಚೆಂಡೆಸೆದ ರಿಷಬ್ ಪಂತ್’ಗೆ ದಂಡ..!

    June 24, 2025

    Dilip Doshi: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ!

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.