ಬೆಂಗಳೂರು: ಇತ್ತೀಚೆಗಷ್ಟೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಬೆನ್ನಲ್ಲೇ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಇದೇ ಘಟನೆಗೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಜೈಲಿಗೂ ಕೂಡ ಹೋಗಿ ಬಂದಿದ್ದರು. ಇದಾದ ಬಳಿಕ ಕುಚಿಕು ಗೆಳೆಯರಂತಿದ್ದ ಇವರ ಸ್ನೇಹಕ್ಕೆ ಬಿರುಕು ಮೂಡಿದ್ಯಾ?ಎಂಬ ಪ್ರಶ್ನೆ ಮೂಡಿದೆ.
ಇದೀಗ ಇಬ್ಬರ ಸ್ನೇಹದ ಬಿರುಕಿನ ಬಗ್ಗೆ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಎರಡ್ಮೂರು ದಿನ ಇರುಸು-ಮುರುಸು ಇರುತ್ತೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ ಅಂತ ಹೇಳಿದ್ದಾರೆ.
ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ, ಅವನಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವನು. ಅವನು ಬ್ಲೇಮ್ ಮಾಡ್ದ ಅಂತ ನಾನ್ ಮಾಡಲ್ಲ. ಅವನು ಕರೆದ ಅಂತ ನಾನ್ ಒಪ್ಕೊಂಡೆ ಅದು ತಪ್ಪಾಯ್ತು ಅಂದೆ ಅಷ್ಟೇ. ನಾನು ಕೂಡ ಅವನು ಬಲವಂತವಾಗಿ ಕರೆದ ಅಂತ ಹೇಳಿಲ್ಲ. ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ,
ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ. ನಾನು ಪ್ರೊಗ್ರಾಮ್ನಲ್ಲಿ ಜಡ್ಜ್ ಆಗಿರೋದ್ರಿಂದ ಅನಿವಾರ್ಯತೆ ಇದ್ದಾಗ ಮಾತ್ರಾ ಹೋಗ್ತಿದ್ದೆ. ಮುಂದಿನ ವಾರ ಸಹ ನನಗೆ ಹೋಗೋಕಾಗಲ್ಲ. ಹಾಗೆಂದ ಮಾತ್ರಕ್ಕೆ ನನ್ನ ರಜತ್ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಕಂಟಿನ್ಯೂ ಆಗುತ್ತೆ. 18 ಸೆಕೆಂಡ್ ರೀಲ್ಸ್ ಗೋಸ್ಕರ 18 ವರ್ಷದ್ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳಲ್ಲ ಅಂತ ವಿನಯ್ ಗೌಡ ಹೇಳಿದ್ದಾರೆ.