ಬೆಂಗಳೂರು ಗ್ರಾಮಾಂತರ : ಜಾತಿಗಣತಿ ವರದಿಯನ್ನು ನಾನು ನೋಡಿಲ್ಲ, ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ ಅಷ್ಟೇ ಎಂದು ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದರು.
ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಹೇಳಿದ್ದಾರೆ ಆದರೆ ನಾನು ಇನ್ನೂ ವರದಿ ನೋಡಿಲ್ಲ. ನಾನು ನಿನ್ನೆ ಬೆಳಗಾವಿ, ಮಂಗಳೂರಿಗೆ ಹೋಗಿದ್ದೆ. ಇದರ ಬಗ್ಗೆ ಇನ್ನೂ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಬೇಕು. ಸಿಎಂ ಅವರು ಇವತ್ತು ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀವಿ ಅಂತ ಹೇಳಿದ್ದಾರೆ. ಆತುರದ ನಿರ್ಧಾರ ಯಾರೂ ತೆಗೆದುಕೊಳ್ಳುವುದಿಲ್ಲ. ಕೆಲವರು ರಾಜಕಾರಣದ ಸ್ಟೇಟ್ ಮೆಂಟ್ ಮಾತನಾಡುತ್ತಾರೆ ಸತ್ಯಾಂಶಗಳನ್ನು ತಿಳಿದುಕೊಂಡು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ ಎಂದರು.
ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಘಾಟಿ ಸುಬ್ರಮಣ್ಯಕ್ಕೆ ಭೇಟಿ ನೀಡಿ, ಘಾಟಿ ಸುಬ್ರಮಣ್ಯನ ದರ್ಶನ ಪಡೆದರು. ನಾಗದೋಷ ಕುಜದೋಷ ಸೇರಿದಂತೆ ಸರ್ಪ ಸಂಸ್ಕಾರಕ್ಕೆ ಪ್ರಸಿದ್ದಿಯಾದ ದೇವಾಲಯಕ್ಕೆ ಭೇಟಿ ನೀಡಿದ ಡಿಕೆಶಿವಕುಮಾರ್ ವಿಶೇಷ ಪೂಜೆ ನೆರವೇರಿಸಿದರು. ಇನ್ನೂ ಈ ವೇಳೆ ಡಿಕೆಶಿವಕುಮಾರ್ ಅವರಿಗೆ ಪೂರ್ಣಕುಂಭ ಮತ್ತು ವಾದ್ಯಗಳೊಂದಿಗೆ ಸ್ವಾಗತ ಕೋರಲಾಯಿತು. ಡಿಕೆಶಿವಕುಮಾರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಮತ್ತು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸಾಥ್ ನೀಡಿದದರು.