ಹುಬ್ಬಳ್ಳಿ : ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿಯೇ ಗೊಂದಲಿ ಇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಜಾತಿಗಣತಿ ವಿಚಾರವಾಗಿ ಮಾತನಾಡುತ್ತಾ ಡಿಸಿಎಂ ಒಂದು ರೀತಿಯ ಹೇಳಿಕೆ ನೀಡುತ್ತಾರೆ ಉಳಿದ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಮೊದಲು ವರದಿಯನ್ನು ವೈಜ್ಞಾನಿಕವಾಗಿ ಅಧ್ಯಾಯನ ಮಾಡಲಿ. ಇವರು ಏನೆ ಸರ್ವೆ ಮಾಡಿದರು ಅಂತಿಮವಾಗಿ ಅದನ್ನು ಕೇಂದ್ರ ಸರ್ಕಾರ ಒಪ್ಪಬೇಕು. ರಾಜ್ಯ ಸರ್ಕಾರಕ್ಕೆ ಸರ್ವೇ ಮಾಡುವ ಅಧಿಕಾರವಿದೆ. ಅದನ್ನು ಅಂತಿಮಗೊಳಿಸುವ ಅಧಿಕಾರ ಕೇಂದ್ರಕ್ಕಿದೆ. ನಕಲಿ ಗಾಂಧಿಗಳ ಹೆಸರು ಹೇಳಿ,ಹೆದರಿಸಿ ಇದನ್ನು ಕ್ಯಾಬಿನೆಟ್ ಚರ್ಚೆ ಆಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಕಾಂಗ್ರೆಸ್ ನಲ್ಲೆ ಬೇಗುದಿ ಇದೆ. ಜಾತಿಗಣತಿಯನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಉಪಯೋಗ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಾತಿ ಗಣತಿ ವರದಿ ; ಆತುರದ ನಿರ್ಧಾರವಿಲ್ಲ, ಸತ್ಯಾಂಶ ತಿಳಿದುಕೊಂಡು ನ್ಯಾಯ ಒದಗಿಸುವ ಕೆಲಸ ; ಡಿಸಿಎಂ ಡಿಕೆಶಿ
1925ರಲ್ಲಿ ಅಂಬೇಡ್ಕರ್ ನಿಪ್ಪಾಣಿಗೆ ಬಂದಿದ್ದರು. ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ನೂರು ಹಿನ್ನಲೆ ಕಾಂಗ್ರೆಸ್ ಸಮಾವೇಶ ಮಾಡಿದರು. ಅವರ ಪಕ್ಷದ ಕಾರ್ಯಕ್ರಮವನ್ನು ಗಾಂಧಿ ಸಮಾವೇಶ ಮಾಡಿದರು. ಅಂಬೇಡ್ಕರ್ ನಿಪ್ಪಾಣಿಗೆ ಬಂದು ನೂರು ವರ್ಷವಾಗಿದೆ. ಈ ಬಗ್ಗೆ ಶಶಿಕಲಾ ಜೊಲ್ಲೆ ಅವರು ರಾಜ್ಯಸರ್ಕಾರದ ಗಮನಕ್ಕೆ ತಂದರೂ ರಾಜ್ಯ ಸರ್ಕಾರ ಸಮಾವೇಶ ಮಾಡುತ್ತಿಲ್ಲ. ಗಾಂಧಿಜಿ ಅವರ ಸಮಾವೇಶ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸಮಾವೇಶ ಯಾಕೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತ ರತ್ನವಾಗಲಿ, ಪದ್ಮವಿಭೂಷಣ ಸಹ ನೀಡಲ್. ಹೈಕಮಾಂಡ್ ಸೂಚನೆಯಂತೆ ರಾಜ್ಯ ಸರ್ಕಾರ ನೂರನೇ ಸಮಾವೇಶ ಮಾಡಿಲ್ಲ ಇದು ಷಡ್ಯಂತರ ಎಂದು ಆರೋಪಿಸಿದರು.