ಚಿತ್ರದುರ್ಗ : ಇತ್ತೀಚಿಗೆ ಫ್ರೀವೆಡ್ಡಿಂಗ್ ಫೋಟೋ ಶೂಟ್ ಟ್ರೆಂಡ್ ಹೆಚ್ಚಾಗಿದೆ. ಕೆಲವರೊಬ್ಬರು ಹಚ್ಚ ಹಸಿರಿನ ಮಧ್ಯೆ, ಪುರಾತನ ಕಟ್ಟಡಗಳು ತಮ್ಮ ಇಷ್ಟದ ತಾಣಗಳಲ್ಲಿ ಫ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ರೈಲ್ವೇ ಟ್ರ್ಯಾಕ್ ಮೇಲೆ ಫ್ರೀವೆಡ್ಡಿಂಗ್ ಫೋಟೋ ಶೂಟ್ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ.
ಎಸ್.. ಫ್ರೀ ವೆಡ್ಡಿಂಗ್ ಶೂಟ್ ವೇಳೆ ದಿಢೀರ್ ಪ್ಯಾಸೆಂಜರ್ ರೈಲು ಬಂದಿದ್ದು, ಯುವ ಜೋಡಿ ಸಮೇತ ಐದು ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಚಿತ್ರದುರ್ಗದ ಮದಕರಿಪುರ ರೈಲ್ವೇ ಟ್ರಾಕ್ ಬಳಿ ನಡೆದಿದೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಶ್ನೆಗೆ ತಬ್ಬಿಬ್ಬಾದ ಮಹಿಳಾ ಆಯೋಗದ ಅಧ್ಯಕ್ಷರು
ಯಾವುದೇ ಅನುಮತಿ ಪಡೆಯದೆ ಯುವ ಜೋಡಿ ಮತ್ತು ಫೊಟೋ ಗ್ರಾಫರ್ ಗಳು ರೈಲ್ವೇ ಟ್ರಾಕ್ ಮೇಲೆ ಶೂಟ್ ಮಾಡುತ್ತಿದ್ದರು. ಅದೇ ವೇಳೆ ಪ್ಯಾಸೆಂಜರ್ ರೈಲು ಬಂದಿದ್ದು, ಭಯದಿಂದ ಐವರು ಓಡೋಡಿ ಪಕ್ಕಕ್ಕೆ ಬಂದಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಯುವಜೋಡಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.