ತುಮಕೂರು : ಜಾತಿಗಣತಿ ವರದಿ ಸಂಪುಟದಲ್ಲಿ ಮಂಡನೆಯಾಗಿದೆ ಅಷ್ಟೇ, ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ಪ್ರತಿಕ್ರಿಯಿಸಿದರು.
ತಿಪಟೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿಯಲ್ಲಿ ಏನಿದೆ ಎಲ್ಲಾ ಓದಿಕೊಂಡು, ಮುಂದಿನ ಸಚಿವ ಸಂಪುಟದಲ್ಲಿ ವಿಶೇಷ ಸಭೆ ಕರೆದಿದ್ದಾರೆ. ಏಪ್ರಿಲ್ 17 ರಂದು ಕರೆದಿದ್ದಾರೆ. ಬರೀ ಅದೊಂದೆ ವಿಚಾರ ಇರಬೇಕು ಬೇರೆ ಏನು ಇರಬಾರದು ಅಂತಾ ಸಿಎಂ ಸೂಚನೆ ನೀಡಿದ್ದಾರೆ. ಮುಂದಿನ 17 ರಂದು ನಡೆಯುವ ಸಚಿವ ಸಂಪುಟದಲ್ಲಿ ಈ ವರದಿ ಬಗ್ಗೆ ಚರ್ಚೆ ಆಗಲಿದೆ ಎಂದರು. ನನಗೂ ಒಂದು ಕಾಪಿ ತಲುಪಿದೆ. ನಾನು ಓದುತ್ತಾ ಇದಿನಿ,ಓದಲು ಶುರು ಮಾಡಿದಿನಿ, ಇನ್ನೂ ಪೂರ್ತಿಯಾಗಿ ಓದಿಲ್ಲ. ಓದಿರೊದು ಅರ್ಧ ಅಷ್ಟೇ, ಹೇಳಿದ್ರೆ ತಪ್ಪಾಗುತ್ತದೆ ಎಂದರು.
ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಗೊಂದಲ ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
2015 ರಿಂದ ಸರ್ಕಾರ ಜನಗಣತಿ ಮಾಡಿದೆ. ಒಂದು ವರದಿ ಒಪ್ಪಿಗೆ ಆಗಲಿ ಅಥವಾ ತಿರಸ್ಕಾರ ಮಾಡಲಿ ಅದು ಬೇರೆ ವಿಚಾರ. ಸರ್ಕಾರಕ್ಕೆ ಕೊಡುವ ಪ್ರಕ್ರಿಯೆಯನ್ನಾದರೂ ಆಗಬೇಕಲ್ವಾ. ಸರ್ಕಾರ ಇದಕ್ಕೆ 168 ಕೋಟಿ ಖರ್ಚು ಮಾಡಿದೆ. ಇದಕ್ಕೆ ಸರಿ ಅಥವಾ ತಪ್ಪು ಅಂತಾ ಹೇಳಬೇಕಲ್ವಾ. ಬಿಜೆಪಿ ಅದು ಸರಿಯಿಲ್ಲ ಅಂತಾ ಬೇಕಾದರೂ ಹೇಳಲಿ. ಆದರೆ ಏನು ಸರಿಯಂತ ನಾವು ಹೇಳ್ತಿವಿ ಅಲ್ವಾ ಎಂದರು.