ಕೊಪ್ಪಳ: ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ 12,726 ಹೆಕ್ಟರ್ ಬೆಳೆ ನಾಶ ಆಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬಹಳ ಕಡೆ ನಷ್ಟವಾಗಿದ್ದು, 12,726 ಹೆಕ್ಟರ್ ಬೆಳೆ ನಾಶ ಆಗಿದೆ. ಎನ್‌ಡಿಆರ್‌ಎಫ್ ಮೂಲಕ ಹಣ ನೀಡಿದರೆ ರೈತರಿಗೆ ನಷ್ಟವಾಗುತ್ತದೆ.
ಈ ಬಗ್ಗೆ ಸಿಎಂ ಹಾಗೂ ಮಿನಿಸ್ಟರ್ ಗಮನಕ್ಕೆ ತರಲಾಗಿದೆ. ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇವೆ. ಬೆಳೆ ಹಾನಿ ಬಗ್ಗೆ ಪರೀಶಿಲನೆ ನಡೆಸಿ, ವರದಿ ನೀಡಲು ಹೇಳಿದ್ದೇನೆ. ರೈತರ ಹಾನಿಗೆ ವಿಶೇಷ ಪ್ಯಾಕೇಜ್ ಕೇಳಲಾಗಿದೆ. ವರದಿ ಬರುವವರೆಗೂ ಕಾಯೋಣ, ಕ್ಯಾಬಿನೆಟ್ ಮುಗಿದ ಬಳಿಕ ಸಿಎಂ ಜೊತೆ ಮಾತನಾಡಲು ಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಬೋವಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ಜಾತಿಗಣತಿ ಮುಗಿಯಲಿ, ನಾನು ಆಮೇಲೆ ಮಾತನಾಡುತ್ತೇನೆ. ಇದರಲ್ಲಿ ಯರ‍್ಯಾರು ಬಿಜೆಪಿಯವರು ಇದ್ದಾರೆ, ಎಲ್ಲ ಮಾಹಿತಿ ಒದಗಿಸುತ್ತೇನೆ. ನಾನು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಗೆದುಕೊಳ್ತೀನಿ ಎಂದು ತಿಳಿಸಿದರು.