ಪಾಕಪದ್ಧತಿಯಲ್ಲಿ ಸಾಸಿವೆಗೆ ಬಹಳ ಮಹತ್ವದ ಸ್ಥಾನವಿದೆ. ರುಚಿ, ಪೋಷಣೆ ಮತ್ತು ಆರೋಗ್ಯ ಗುಣಗಳಿಗೆ ಅದು ಹೆಸರುವಾಸಿಯಾಗಿದೆ. ಯಾವುದೇ ಪದಾರ್ಥಕ್ಕೆ ಸಾಸಿವೆಯ ಒಗ್ಗರಣೆ ಬಿದ್ದರೆ ಸಾಕು ಅದರ ಟೇಸ್ಟ್ ಬದಲಾಗುತ್ತದೆ. ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಸೊಪ್ಪಿನಲ್ಲಿ ಸಾಸಿವೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಸಿವೆ ಆರೋಗ್ಯಕರ ಖನಿಜಗಳಿಂದ ಸಮೃದ್ಧವಾಗಿದೆ.
ಕಲ್ಲುಕಂಬದಲ್ಲಿ ಕನಕದಾಸ, ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದ ಭೈರತಿ ಸುರೇಶ್
ಮನೆಯಲ್ಲಿ ಸಾಮಾನ್ಯವಾಗಿ ಒಗ್ಗರಣೆ ಹಾಕಬೇಕು ಅಂದಾಗ ಅದರಲ್ಲಿ ಬಳಸಲಾಗುವ ಮುಖ್ಯವಾದ ಪದಾರ್ಥ ಅಂದರೆ ಸಾಸಿವೆ. ಈ ಸಾಸಿವೆ ಕೇವಲ ರುಚಿ ಮಾತ್ರ ಕೊಡುವುದಲ್ಲದೆ, ಆರೋಗ್ಯಕ್ಕೆ ಈ ಪುಟ್ಟ ಕಾಳಿನಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದ್ದರಿಂದ ಎಣ್ಣೆಯಲ್ಲಿ ಒಗ್ಗರಣೆ ರೂಪದಲ್ಲಿ ತಿನ್ನಬಹುದು. ಅಲ್ಲದೆ ಸಾಸಿವೆ ಎಣ್ಣೆಯನ್ನೂ ಕೂಡಾ ಬಳಸಬಹುದಾಗಿದೆ.
ಸಾಸಿವೆಯನ್ನು ಬಳಸಿದ ಅಡುಗೆಯಲ್ಲಿ ರುಚಿ ಹೆಚ್ಚಿರುವುದರ ಜೊತೆಗೆ ಪರಿಮಳ ಕೂಡಾ ಹೆಚ್ಚಾಗಿರುತ್ತದೆ. ಆದ್ದರಿಂದ ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಹಲವಾರು ಪ್ರಯೋಜನಗಳನ್ನು ಹೊಂದಿರುವ ಈ ಪುಟ್ಟ ಕಾಳಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆ.
ಪ್ರತಿನಿತ್ಯ ಇದರ ಸೇವನೆಯು ಮೂಳೆಗಳಿಗೆ ಅತ್ಯುತ್ತಮ. ದೊಡ್ಡವರಿಗಾಗಲಿ ಚಿಕ್ಕವರಿಗಾಗಲಿ ಮೂಳೆಗಳನ್ನು ಬಲ ಪಡಿಸಲು ಅವರ ಅಹಾರದಲ್ಲಿ ಸಾಸಿವೆಯನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ಸಾಸಿವೆಯನ್ನು ಹಾಗೇ ಉಪಯೋಗಿಸಲು ಆಗುವುದಿಲ್ಲ. ಅದನ್ನು ಎಣ್ಣೆಯಲ್ಲಿ ಕರಿದಲ್ಲಿ ಮಾತ್ರ ಅದರ ರುಚಿ ಸಿಗುತ್ತದೆ. ಈ ಕಾಳು ಮೂಳೆಗಳನ್ನು ಬಲ ಪಡಿಸಲು ತುಂಬಾ ಉಪಯೋಗಕಾರಿಯಾದ ಇದರಲ್ಲಿ ಶಕ್ತಿವರ್ಧಕ ಗುಣಗಳು ಮತ್ತು ಖನಿಜಾಂಶಗಳು ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮ ಪರಿಣಾಮಬೀರುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಸಹಾಯಕಾರಿ. ಆದ್ದರಿಂದ ಅಡುಗೆಯಲ್ಲಿ ಸಾಸಿವೆಯನ್ನು ಬಳಸುವುದು ಅಥವಾ ಸಾಸಿವೆ ಎಣ್ಣೆಯನ್ನು ಕೂಡಾ ಬಳಸುವುದು ಪ್ರಯೋಜನಕಾರಿ.
ಹಲವಾರು ಕಾಯಿಲೆಗಳಿಗೆ ರೋಗ ನಿರೋಧಕ ಶಕ್ತಿಯ ಅವಶ್ಯಕತೆಯಿದೆ . ಈ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚು ಮಾಡಲು ಸಾಸಿವೆಯು ಸಹಾಯಕಾರಿ.
ಕೂದಲಿನ ಆರೋಗ್ಯಕ್ಕೆ : ಕೂದಲು ಉದುರುವಿಕೆ , ತಲೆಹೊಟ್ಟಿನಂತ ಸಮಸ್ಯೆಯನ್ನು ಹೋಗಲಾಡಿಸಿ ಕೂದಲು ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.
ಪ್ರಮುಖವಾಗಿ ಹೆಣ್ಣುಮಕ್ಕಳಿಗೆ ಚರ್ಮದ ಆರೈಕೆಯಲ್ಲಿ ಇದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ .ಮೊಡವೆಗಳಾಗದೆ ಇರುವ ಹಾಗೆ , ಮೊಡವೆ ಕಲೆಗಳನ್ನು ಹೋಗಲಾಡಿಸಲು, ಚರ್ಮವು ಕಾಂತಿಯುತವಾಗಿ ಹೊಳೆಯಲು ಇತ್ಯಾದಿಯಾಗಿ ಚರ್ಮದ ಕಾಳಜಿವಹಿಸುವವರಿಗಾಗಿ ಸಾಸಿವೆಯ ಸೇವನೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಅಲ್ಲದೆ ಅಲರ್ಜಿಗಳಾಗದಂತೆ ತಡೆಯಲೂ ಕೂಡಾ ಇದು ಸಹಾಯ ಮಾಡುತ್ತದೆ.
ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಕೂಡಾ ಸಾಸಿವೆಯು ಪಾತ್ರವಹಿಸುತ್ತದೆ. ಹೀಗೆ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಅಥವಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಸಾಸಿವೆಯು ಪ್ರಮುಖ ಪಾತ್ರವಹಿಸುತ್ತದೆ.