ಬೆಂಗಳೂರು:– ಜಾತಿಗಣತಿ ವರದಿ ಯಾರ ವಿರೋಧವೂ ಇಲ್ಲ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮಧುಮೇಹಿಗಳ ಗಮನಕ್ಕೆ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಸಾಕು..ಸಕ್ಕರೆ ಕಾಯಿಲೆ ಓಡಿ ಹೋಗತ್ತೆ!
ಈ ಸಂಬಂಧ ಮಾತನಾಡಿದ ಅವರು, ಜಾತಿಗಣತಿ ವರದಿ ಯಾರ ಪರವಾಗಿಯೂ ಇಲ್ಲ. ವಿರೋಧವೂ ಇಲ್ಲ. ಸಂವಿಧಾನದ ಆಶಯದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಏ.17 ರಂದು ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಾಮಾಜಿಕ ಶೈಕ್ಷಣಿಕ ಆರ್ಥಿಕ ಗಣತಿ ವರದಿ ಇದು. ಸಿಎಂ ಸಿದ್ದರಾಮಯ್ಯ ಅವರು ಸಮಿತಿ ರಚನೆ ಮಾಡಿದ್ದರು. ಸುಮಾರು 200 ಕೋಟಿ ರೂ. ಕೊಟ್ಟು ವರದಿ ಮಾಡಿಸಿದ್ದರು. ಪ್ರಣಾಳಿಕೆಯಲ್ಲೂ ಜಾತಿಗಣತಿಗೆ ಪಕ್ಷ ಬದ್ಧವಾಗಿತ್ತು. ಭಾರತ ದೇಶದಲ್ಲಿ ಜಾತಿಗಣತಿ ಮಾಡಲು ಕೆಲ ಪ್ರಯತ್ನ ಆಗಿತ್ತು. ಎಲ್ಲವನ್ನೂ ಕೂಲಂಕಶವಾಗಿ ಪರಿಗಣಿಸಿ ವರದಿ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.
ಸ್ವಾತಂತ್ರ್ಯ ಬಂದಾಗ 35 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಜನಸಂಖ್ಯೆ ಆಗಿದೆ. ಅದರ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನ ನೀಡಬೇಕು. ಯಾವ ಯಾವ ಸಮಾಜಕ್ಕೆ ಏನು ಸಿಗಬೇಕು ಅದನ್ನ ಕೊಡಬೇಕು ಎಂದು ಹೇಳಿದರು.