ಮಲಯಾಳಂ ಚಿತ್ರರಂಗದ ಮನಮೋಹಕ ನಟಿ ಅನುಪಮಾ ಪರಮೇಶ್ವರನ್. ಡ್ರಾಗ್ಯನ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಅನುಪಮಾ ಕನ್ನಡ ಚಿತ್ರರಂಗಕ್ಕೂ ಚಿರಪರಿಚಿತ. ನಟಸಾರ್ವಭೌಮ ಚಿತ್ರದಲ್ಲಿ ಅಪ್ಪು ಜೊತೆ ಅಭಿನಯಿಸಿದ್ದ ಈ ಮಲ್ಲು ಕುಟ್ಟಿ ತೆಲುಗು, ತಮಿಳು ಸೇರಿದಂತೆ ದಕ್ಷಿಣ ಚಿತ್ರರಂಗದ ಬ್ಯುಸಿಯೆಸ್ಟ್ ನಟಿ.
ಅನುಪಮಾ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರದಲ್ಲಿ ನಟಿಸುತ್ತಾರೆ. ತಮ್ಮ ಗುಂಗುರು ಕೂದಲಿನ ಜೊತೆಗೆ ಅಭಿನಯದಿಂದ ಮೋಡಿ ಮಾಡಿರುವ ಅನುಪಮಾ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಅದಕ್ಕೀಗ ಪ್ರೋವ್ ಸಿಕ್ಕಿದೆ.
ನೀಲಿ ಚಂದಿರನ ನೆರಳಲ್ಲಿ ಅನುಪಮಾ ಹಾಗೂ ಧ್ರುವ್ ಚುಂಚಿಸುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ, ಈ ಫೋಟೋ ನಕಲಿಯೋ ಅಸಲಿಯೋ ಎಂಬ ಕ್ಲಾರಿಟಿ ಇಲ್ಲ. ಕಿಡಿಗೇಡಿಗಳು ಎಐ ಅಂತಹ ತಂತ್ರಜ್ಞಾನವನ್ನು ಬಳಸಿ ಇಂತಹ ಕೃತ್ಯವನ್ನು ಮಾಡಿದ್ದಾರಾ? ಇದೆಲ್ಲದರ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಆದರೆ, ಇದೂವರೆಗೂ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಈಗಾಗಲೇ ಲೀಕ್ ಆಗಿ ಹಲ್ಚಲ್ ಎಬ್ಬಿಸುತ್ತಿರುವ ಫೋಟೊ ಬಗ್ಗೆ ಇನ್ನು ಪ್ರತಿಕ್ರಿಯೆ ನೀಡಿಲ್ಲ.
ಬೈಸನ್ ಸಿನಿಮಾದಲ್ಲಿ ಅನುಪಮಾ ಹಾಗೂ ಧ್ರುವ್ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಫೋಟೋ ಇರಬಹುದಾ ಅನ್ನೋ ಅನುಮಾನ ಕೂಡ ಇದೆ. ಎಲ್ಲದಕ್ಕೂ ಈ ಜೋಡಿಯೇ ಉತ್ತರ ಕೊಡಬೇಕಿದೆ.