ತಾಯಿ ಕರುಳೇ ಹಾಗೇ. ತನ್ನ ಮಕ್ಕಳಿಗೆ ಏನಾದ್ರೂ ಸಂಕಷ್ಟ ಎದುರಾದರೇ ಮೊದಲು ಬೇಡಿಕೊಳೋದು ದೇವರನ್ನು. ಕಾಪಾಡಪ್ಪ ತಂದೆ ನನ್ನ ಮಕ್ಕಳನ್ನು ರಕ್ಷಿಸು ಅಂತಾ ಆ ತಾಯಿ ಹೃದಯ ದೇವರಲ್ಲಿ ಮೊರೆ ಇಡುತ್ತಿದ್ದೆ. ಮೊನ್ನೆ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಪುತ್ರ ಸಿಂಗಾಪುರದ ಬೆಂಕಿ ಅವಘಡದಲ್ಲಿ ಸಣ್ಣ ಪುಟ್ಡ ಗಾಯದೊಂದಿಗೆ ಜೀವಪಾಯದಿಂದ ಪಾರಾಗಿದ್ದ. ಸಿಂಗಾಪುರಕ್ಕೆ ತೆರಳಿ ಪವನ್ ಹಾಗೂ ಪತ್ನಿ ಮಗ ಮಾರ್ಕ್ ಶಂಕರ್ ನನ್ನು ವಾಪಸ್ ಇಂಡಿಯಾಗೆ ಕರೆದು ತಂದಿದ್ದರು. ಮಗ ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆ ಅನ್ನಾ ಜಿನೇವಾ ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆ.
ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಸಿಲುಕಿ ಗಾಯಗೊಂಡಿದ್ದರಿಂದ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನ ಬಳಿ ಹರಕೆಯನ್ನ ಹೊತ್ತುಕೊಂಡಿದ್ದರಂತೆ. ಹೀಗಾಗಿ ಸಿಂಗಾಪುರದಿಂದ ಭಾರತಕ್ಕೆ ಹಿಂತಿರುಗುತ್ತಿದ್ದಂತೆ ತಿರುಮಲಕ್ಕೆ ಬಂದು ಮುಡಿ ನೀಡಿ ಹರಕೆ ತೀರಿಸಿದ್ದಾರೆ. ಇಂದು ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ತಮ್ಮ ಮಗನ ರಕ್ಷಣೆ ಮಾಡುವಂತೆ ಡಿಸಿಎಂ ಪವನ್ ಪತ್ನಿ ತಿಮ್ಮಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಷ್ಯಾ ಮೂಲದವರಾಗಿರುವ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಾರೆ. ಹೀಗಿರುವಾಗ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿರೋದು, ಹಿಂದೂ ಧರ್ಮದ ಬಗ್ಗೆ ಅವರಿಗೆ ಇರೋ ನಂಬಿಕೆ ಏನೂ ಅನ್ನೋದು ತೋರ್ಪಡಿಸ್ತಿದೆ.
ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಫೋಟೋ ವೈರಲ್ ಆಗುತ್ತಿದ್ದಂತೆ ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಮುಡಿಕೊಟ್ಟ ಕೊಟ್ಟ ಫೋಟೋ ಕೂಡ ವೈರಲ್ ಆಗುತ್ತಿದೆ. 2016ರ ಸಮಯದಲ್ಲಿ ನಮ್ರತಾ ತಮ್ಮ ಮಕ್ಕಳಾದ ಗೌತಮ್ ಮತ್ತು ಸಿತಾರ ಅವರೊಂದಿಗೆ ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ ಭೇಟಿ, ಮಕ್ಕಳ ಯೋಗಕ್ಷೇಮಕ್ಕಾಗಿ ಮುಡಿಕೊಟ್ಟಿದ್ದರು.