ಉಕ್ರೇನ್ನ ಕೈವ್ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋಡೌನ್ಗೆ ರಷ್ಯಾದ ಕ್ಷಿಪಣಿ ಡಿಕ್ಕಿ ಹೊಡೆದಿದೆ ಎಂದು ಭಾರತದಲ್ಲಿರುವ ಉಕ್ರೇನಿಯನ್ ರಾಯಭಾರ ಕಚೇರಿ ಆರೋಪಿಸಿದೆ. ಭಾರತದೊಂದಿಗೆ ‘ವಿಶೇಷ ಸ್ನೇಹ’ ಹೊಂದಿರುವುದಾಗಿ ಹೇಳಿಕೊಳ್ಳುತ್ತಾ, ಉಕ್ರೇನ್ನಲ್ಲಿರುವ ಭಾರತೀಯ ವ್ಯವಹಾರಗಳನ್ನು ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಅದು ಆರೋಪಿಸಿದೆ.
ನಾಶವಾದ ಗೋದಾಮು ಉಕ್ರೇನ್ನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾದ ಕುಸುಮ್ ಎಂಬ ಔಷಧ ಕಂಪನಿಗೆ ಸೇರಿದೆ. ವರದಿಗಳ ಪ್ರಕಾರ, ಕುಸುಮ್ ಹೆಲ್ತ್ಕೇರ್ ಮಾನವೀಯ ಉದ್ದೇಶಗಳಿಗಾಗಿ ಬಳಸಲು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸಿದೆ. ಈ ಕಂಪನಿಯು ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಅವರ ಒಡೆತನದಲ್ಲಿದೆ.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
” ರಷ್ಯಾದ ಕ್ಷಿಪಣಿಯು ಉಕ್ರೇನ್ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್ನ ಗೋದಾಮಿನ ಮೇಲೆ ಅಪ್ಪಳಿಸಿತು. ಭಾರತದೊಂದಿಗೆ ‘ವಿಶೇಷ ಸ್ನೇಹ’ ಎಂದು ಹೇಳಿಕೊಳ್ಳುತ್ತಾ, ಮಾಸ್ಕೋ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗಾಗಿ ಉದ್ದೇಶಿಸಲಾದ ಔಷಧಿಗಳನ್ನು ಅದು ನಾಶಪಡಿಸುತ್ತಿದೆ” ಎಂದು ಉಕ್ರೇನಿಯನ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಭಾರತ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.