ವಿಜಯಪುರ: ಜಾತಿಗಣತಿ ಮುಂದಿಟ್ಟಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸೋಕೆ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಇಳಿಸೋಕೆ ಪ್ಲಾನ್ ನಡೆದಿದೆ. ಹಾಗೇ ನನ್ನ ಉಚ್ಚಾಟನೆ ಹಿಂದೆಯೂ ಷಡ್ಯಂತ್ರ ಇದೆ. ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ. ಕಾಂಗ್ರೆಸ್ ಒಡೆದು ಬರ್ತಿವಿ ಎಂದು ಭರವಸೆ ಕೊಟ್ಟ ಬಳಿಕ ನನ್ನ ಉಚ್ಚಾಟನೆ ಆಗಿದೆ ಎಂದು ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ.
ಯತ್ನಾಳ್ ಪಕ್ಷದಲ್ಲಿ ಇರೋತನ ಬರೋಕೆ ಆಗೋದಿಲ್ಲ. ಯತ್ನಾಳ್ ಕಟ್ಟಾ ಹಿಂದೂ, ಅವನನ್ನ ಹೊರಹಾಕುವ ವರೆಗೂ ಬರೊಲ್ಲ ಎಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಆದ್ರೆ ಅದು ಫೇಲ್ ಆಗಿದೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಇದೆ. ಮಹಾನಾಯಕನ ಹಿಂದೆ ಯಾರಿಲ್ಲ ಎಂದು ಕೈ ಬಿಟ್ಟಿದ್ದಾರೆ. ಆ ಮಹಾನಾಯಕ ಹಿಂದೆ 10 ಜನ ಶಾಸಕರು ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದು ಟಚ್ ಈಜಿ ಇಲ್ಲ
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಶಾಸಕ ಯತ್ನಾಳ್, ಸಿದ್ದರಾಮಯ್ಯ ಇಳಿಸ್ತೀನಿ ಅನ್ನೋದು ಆಗಲ್ಲ. ಕಾಂಗ್ರೆಸ್ ಪಕ್ಷದ ಕೊನೆಯ ಮೊಳೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಹಿಂದೆ ಎಲ್ಲ ಶಾಸಕರು ಇದ್ದಾರೆ ಎಂದು ಯತ್ನಾಳ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ.