ಕೋಲಾರ: ಜಾತಿ ಜನಗಣತಿ ಜಾರಿ ವಿಚಾರದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ, ಇಷ್ಟು ದಿವಸ ಜಾತಿ ಜನಗಣತಿಯನ್ನು ಪ್ರೀಸರ್ ನಲ್ಲಿಟ್ಟಿದ್ದಾರೆ ಎಂದರು.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ರಾಜ್ಯದ 95% ರಷ್ಟು ಜನರಿಗೆ ಜಾತಿಗಣತಿಯಿಂದ ಖುಷಿ ಆಗಿದೆ. ಆದರೆ ಬಿಜೆಪಿಯವರಿಗೆ ಮಾಡುವ ಯೋಗ್ಯತೆ ಇಲ್ಲ, ಏನಾದರೂ ಮಾಡಿದ್ರೆ ಸಹಿಸಿಕೊಳ್ಳಲ್ಲ. ಈ ಹಿಂದೆ ಗ್ಯಾರಂಟಿಗಳನ್ನು ಕೊಟ್ಟಾಗ ಹೀಗೆಯೇ ಮಾತನಾಡಿದ್ದರು. ಲೋಕಸಭೆ ಚುನಾವಣೆಗೆ ನಿಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈಗ ಎಲ್ಲರಿಗೂ ಗ್ಯಾರಂಟಿ ಸಿಗುತ್ತಿದೆ. ರಾಜ್ಯದ ಜನರೆಲ್ಲರೂ ಖುಷಿಯಾಗಿದ್ದಾರೆ, ನನ್ನ ವೈಯುಕ್ತಿಕವಾಗಿ ಇದು ಸರಿಯಿದೆ ಎಂದರು.
ಜಾತಿಗಣತಿಗೆ ನನ್ನ ಒಪ್ಪಿಗೆ ಇದೆ. ಇದೇ 17ರಂದು ಎಲ್ಲಾ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಇದರಲ್ಲಿ ನನ್ನ ಒಪ್ಪಿಗೆ ಇದೆ. ಅಲ್ಲದೇ ಇದೇ ತಿಂಗಳ 17ರಂದು ವಿಶೇಷ ಸಚಿವ ಸಂಪುಟ ಸಭೆಯನ್ನ ಕರೆಯಲಾಗಿದೆ. ಇದರಲ್ಲಿ ಎಲ್ಲಾ ಸಚಿವರು ಜಾತಿಗಣತಿಗೆ ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ ಎಂದರು.