ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮನೆಗೆ ಹೊಸ ಅತಿಥಿ ಎಂಟ್ರಿಯಾಗಿದೆ. ಅಂದರೆ ರಿಷಬ್ ಐಷಾರಾಮಿ ಕಾರಿನ ಮಾಲೀಕರಾಗಿದ್ದಾರೆ. ಟೊಯೋಟಾ ಕಂಪನಿಯ ಕಪ್ಪು ಬಣ್ಣದ ವೆಲ್ಫೈರ್ ದುಬಾರಿ ಕಾರನ್ನು ಕಾಂತಾರ ಸ್ಟಾರ್ ಖರೀದಿಸಿದ್ದಾರೆ. ವೆಲ್ಫೈರ್ ಕಾರಿನ ಬೆಲೆ 1 ಕೋಟಿ 22 ಲಕ್ಷದಿಂದ, 1 ಕೋಟಿ 32 ಲಕ್ಷ ರೂಪಾಯಿಯವರೆಗೂ ಇದೆಯಂತೆ. ಆನ್ ರೋಡ್ಗೆ ಈ ದುಬಾರಿ ಕಾರಿನ ಬೆಲೆ 1 ಕೋಟಿ 40 ಲಕ್ಷ ರೂಪಾಯಿ ಎನ್ನಲಾಗಿದೆ.
ಬಹುತೇಕ ರಾಜಕಾರಣಿಗಳು, ದೊಡ್ಡ ಸಿನಿಮಾತಾರೆಯರ ಬಳಿ ಈ ಕಾರು ಇರುವುದು ವಿಶೇಷ. ಈ ಕಾರಿನ ಒಳಾಂಗಣವು ತುಂಬಾ ವಿಶಾಲವಾಗಿದ್ದು, ದೂರ ಪ್ರಯಾಣ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಅದರಲ್ಲೂ ಸಿನಿಮಾ ಮಂದಿಗೆ ಶೂಟಿಂಗ್, ಓಡಾಟ ಅಂತ ಒಂದಲ್ಲಾ ಒಂದು ಕೆಲಸಗಳು ಇದ್ದೇ ಇರುತ್ತದೆ. ಹಾಗಾಗಿ, ಸೆಲೆಬ್ರಿಟಿಗಳು ಟೊಯೋಟಾ ವೆಲ್ಫೇರ್ ಕಾರನ್ನು ಹೆಚ್ಚು ಇಷ್ಟಪಡುತ್ತಾರೆ.
ರಿಷಬ್ ಶೆಟ್ಟಿ ಈ ಹೊಸ ಟೊಯೋಟಾ . ವೆಲ್ಫೈರ್ ಕಾರನ್ನ ಯಲಹಂಕ ಆರ್ಟಿಓನಲ್ಲಿ ನೋಂದಣಿ ಮಾಡಿಸಲಾಗಿದೆ. ಕಾರಿನ ನಂಬರ್ ಕೆಎ 50 ಎಂಇ 6669 ಎಂದಿದೆ. ಈ ಫ್ಯಾನ್ಸಿ ನಂಬರ್ ಪಡೆಯಲು ರಿಷಬ್ ಹೆಚ್ಚುವರಿ ಶುಲ್ಕ ಪಾವತಿಸಿರುವ ಸಾಧ್ಯತೆ ಹೆಚ್ಚಿದೆ.
ರಿಷಬ್ ಬಳಿ ಇದೆ ಆಡಿಕ್ಯೂ7 ಕಾರು
ರಿಷಬ್ ಶೆಟ್ಟಿ ಬಳಿಕ ಈಗಾಗಾಲೇ ಆಡಿಕ್ಯೂ7 ಕಾರು ಇದೆ. ಈ ಆಡಿ ಕ್ಯೂ7 ಸೆಲೆಬ್ರೆಟಿಗಳ ಅಚ್ಚು ಮೆಚ್ಚಿನ ಕಾರುಗಳಲ್ಲಿ ಒಂದು. ಈ ಕಾರು ಹಲವಾರು ಸೆಲೆಬ್ರಿಟಿಗಳ ಬಳಿ ಇದೆ. ಇದೀಗ ರಿಷಬ್ ಬಳಿ ಆಡಿಕ್ಯೂ7 ಜೊತೆಗೆ ವೆಲ್ಫೇರ್ ಹೊಸ ಸೇರ್ಪಡೆ.
ಕಾಂತಾರ ಪ್ರೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 2ರಂದು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಅಮೇಜಾನ್ ಪ್ರೈಮ್ ಗೆ ಭಾರೀ ಮೊತ್ತಕ್ಕೆ ಒಟಿಟಿ ಹಕ್ಕು ಮಾರಾಟವಾಗಿದೆ.