2025ರ ಆವೃತ್ತಿಯ ಐಪಿಎಲ್ ನ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿರುವ ಚೆನ್ನೈಸೂಪರ್ ಕಿಂಗ್ಸ್ ತಂಡ ಸದ್ಯ ಅನಿಶ್ಚಿತತೆಯ ಸ್ಥಿತಿಯಲ್ಲಿದೆ. ಐದು ಬಾರಿಯ ಚಾಂಪಿಯನ್ ಸಿ ಎಸ್ ಕೆ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಶುಗರ್ ಕಂಟ್ರೋಲ್ ಗೆ ತರಲು ಬೆಳಗಿನ ಜಾವ ತುಪ್ಪಕ್ಕೆ ಈ ಪುಡಿ ಬೆರೆಸಿ: ಆಮೇಲೆ ನೋಡಿ ಚಮತ್ಕಾರ!
2025ರ IPL ನಲ್ಲಿ CSK ಗೆ ಕಠಿಣವಾಗಿದೆ. ಐದು ಬಾರಿಯ ಚಾಂಪಿಯನ್ ತಂಡ ಸತತ 5 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ರೀತಿ ಕಳಪೆ ಸಾಧನೆ ಮಾಡಿದೆ. ಈ ಬಾರಿ ತಂಡದ ಬ್ಯಾಟಿಂಗ್ ಸಮಸ್ಯೆಯಾಗಿದ್ದು, ಆರಂಭಿಕರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಈ ಸೋಲಿನ ಸರಣಿಯು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.
ಸಿಎಸ್ಕೆಗೆ ಮತ್ತೊಂದು ಹಿನ್ನಡೆಯೆಂದರೆ ನಾಯಕ ರುತುರಾಜ್ ಗಾಯಕ್ವಾಡ್ರ ಗಾಯ. ಮೊಣಕೈ ಗಾಯದಿಂದಾಗಿ ಋತುರಾಜ್ ಋತುವಿನ ಮಧ್ಯದಿಂದಲೇ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದರಿಂದ ತಂಡದ ತಂತ್ರಗಾರಿಕೆ ಮತ್ತು ನಾಯಕತ್ವದ ಮೇಲೆ ಪರಿಣಾಮ ಬೀರಿದೆ. ಗಾಯಕ್ವಾಡ್ರ ಗೈರು ತಂಡಕ್ಕೆ ದೊಡ್ಡ ಆಘಾತವಾಗಿದೆ.
ಗಾಯಕ್ವಾಡ್ರ ಅನುಪಸ್ಥಿತಿಯಲ್ಲಿ ಸಿಎಸ್ಕೆ ಅನುಭವಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಎಂಎಸ್ ಧೋನಿಯನ್ನು ಉಳಿದ ಋತುವಿಗೆ ನಾಯಕನನ್ನಾಗಿ ನೇಮಿಸಿದೆ. ಧೋನಿಯ ನಾಯಕತ್ವದಲ್ಲಿ ತಂಡವು ಚೇತರಿಕೆಯ ಭರವಸೆಯಲ್ಲಿದೆ. ಆದರೆ, ಕೋಲ್ಕತ್ತಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಧೋನಿಯೂ ಗೆಲುವು ತಂದುಕೊಡಲು ವಿಫಲರಾದರು.
ಇದೀಗ ಗಾಯಾಳು ಗಾಯಕ್ವಾಡ್ರ ಬದಲಿಗೆ ಸಿಎಸ್ಕೆ 17 ವರ್ಷದ ಮುಂಬೈ ಬ್ಯಾಟ್ಸ್ಮನ್ ಆಯುಷ್ ಮಾತ್ರೆಯನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದ ಆಯುಷ್, ತಕ್ಷಣ ತಂಡಕ್ಕೆ ಸೇರಲು ಸೂಚನೆ ಪಡೆದಿದ್ದಾರೆ. ಆದರೆ, ಕೆಲವು ದಿನಗಳ ಬಳಿಕವೇ ಅವರು ಧೋನಿಯ ನೇತೃತ್ವದ ತಂಡಕ್ಕೆ ಕೂಡಿಕೊಳ್ಳಲಿದ್ದಾರೆ.
ಮುಂಬೈನ ಆಯುಷ್ ಮ್ಹಾತ್ರೆ ದೇಶೀಯ ಕ್ರಿಕೆಟ್ನಲ್ಲಿ ಗಮನ ಸೆಳೆದಿದ್ದಾರೆ. 9 ಪ್ರಥಮ ದರ್ಜೆ ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕದೊಂದಿಗೆ 504 ರನ್ ಗಳಿಸಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಲ್ಲಿ 2 ಶತಕಗಳೊಂದಿಗೆ 458 ರನ್ ಕಲೆಹಾಕಿದ್ದಾರೆ. 2024ರ ಅಕ್ಟೋಬರ್ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಆಯುಷ್, ಯುವ ಪ್ರತಿಭೆಯಾಗಿ ಮಿಂಚಿದ್ದಾರೆ
ಸಿಎಸ್ಕೆಯ ಬ್ಯಾಟಿಂಗ್ ಸಮಸ್ಯೆಗೆ ಆಯುಷ್ ಮಾತ್ರೆಯ ಸೇರ್ಪಡೆ ಪರಿಹಾರವಾಗಬಹುದೇ ಎಂಬ ನಿರೀಕ್ಷೆಯಿದೆ.