ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ ಕೂದಲಿನ ಬಣ್ಣ ಕೂಡ ಅಷ್ಟೇ ವಯಸ್ಸಾ ಗುತ್ತಾ ಹೋದಂತೆ, ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರು ಗುತ್ತದೆ! ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು, ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗೆ ಆಗುವ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆ.
ಇದಕ್ಕೆ ಪ್ರಮುಖ ಕಾರಣಗಳು ಕೂದಲಿಗೆ, ಕೆಮಿಕಲ್ ಅಂಶ ಹೆಚ್ಚಿರುವ ಹೇರ್ ಡೈ, ಶಾಂಪೂ, ಸೋಪ್, ಹಾಗೂ ನಾವು ಅನುಸರಿಸುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳಿಂದಲೂ ಕೂಡ ಇಂದಿನ ದಿನಗಳಲ್ಲಿ, ಹೆಚ್ಚಿನವರಿಗೆ ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗೆ ಆಗುವ ಸಮಸ್ಯೆ ಎದುರಾಗುತ್ತಿದೆ. ಬನ್ನಿ ಈ ಲೇಖನದಲ್ಲಿ ಕೂದಲಿ ಬೆಳ್ಳಗಾಗುವ ಸಮಸ್ಯೆಗೆ ಸರಳ ಮನೆಮದ್ದುಗಳ ಬಗ್ಗೆ ನೋಡೋಣ..
ಪೇರಲ ಹಣ್ಣಿನ ಗಿಡದ ಎಲೆಗಳು ಕೂದಲಿಗೆ ಅತ್ಯುತ್ತಮವಾಗಿವೆ. ಪೇರಲ ಎಲೆಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಇರುತ್ತದೆ.
ಕೂದಲು ಮತ್ತು ಚರ್ಮಕ್ಕೆ ಪೇರಲ ಎಲೆ ಪ್ರಯೋಜನಕಾರಿ ಆಗಿದೆ. ಕೂದಲಿಗೆ ಪೇರಲ ಎಲೆಗಳನ್ನು ನೀವು ಹಲವು ವಿಧಗಳಲ್ಲಿ ಬಳಸಬಹುದು. ಪೇರಲ ಎಲೆಗಳನ್ನು ಕೂದಲಿಗೆ ಹೇಗೆ ಬಳಸಬೇಕು ಮತ್ತು ಇದರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ. ಮಿಕ್ಸರ್ನಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ನಿಮ್ಮ ಕೂದಲಿಗೆ ಹಚ್ಚಿ. ಬೆರಳುಗಳಿಂದ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಬಿಡಿ. ಬಳಿಕ ತಲೆಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಇದನ್ನು ಹಚ್ಚುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು ಜೊತೆಗೆ ತಲೆಹೊಟ್ಟು ತೊಲಗುವುದು.
ಪೇರಲ ಎಲೆಗಳನ್ನು ತೊಳೆದು, ಬ್ಲೆಂಡರ್ಗೆ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ಈಗ ಈರುಳ್ಳಿ ರಸ ತೆಗೆದುಕೊಳ್ಳಿ. ಪೇರಲ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ತಲೆಗೆ ಹಚ್ಚಿ. ಅರ್ಧ ಗಂಟೆಯ ನಂತರ ತೊಳೆಯಿರಿ.
ಪೇರಲ ಎಲೆಗಳನ್ನು ತೊಳೆಯಿರಿ. ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಕುದಿಸಿ, ತಣ್ಣಗಾಗಿಸಿ. ತಣ್ಣಗಾದ ನಂತರ ಅದನ್ನು ಶೋಧಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಬಿಟ್ಟು ಕೂದಲನ್ನು ತೊಳೆಯಿರಿ.