ಪರಿ ಪ್ರಪಂಚದಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಮಿಲನಾ-ಕೃಷ್ಣ ಫುಲ್ ಹ್ಯಾಪಿಯಾಗಿದ್ದಾರೆ. ಮನೆಗೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡಿರುವ ಈ ಜೋಡಿಗೆ ಪರಿ ತಮ್ಮ ಪ್ರಪಂಚ ಅಂತಾ ಹೊಸ ಹೊಸ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಪ್ರೀತಿಸಿ ಮದುವೆಯಾಗಿರುವ ಮಿಲನಾ ಕೃಷ್ಣಗೆ ಪರಿ ಎಂಬ ಮುದ್ದಾದ ಮಗಳಿದ್ದಾರೆ. ಆ ಕ್ಯೂಟ್ ಮಗುವಿನ ಫೋಟೋಗಳನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಾರೆ. ಪರಿ ಕ್ಯೂಟ್ನೆಸ್ಟ್ ಫೋಟೋ ನೋಡಿ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ಈ ಜೋಡಿ ಶ್ರೀಲಂಕಾಗೆ ತೆರಳಿದ್ದರು. ಈ ವೇಳೆ ಪರಿ ಜೊತೆ ಮಿಲನಾ ಕೃಷ್ಣ ಅಲ್ಲದೇ ನಟಿ ಅಮೃತಾ ಅಯ್ಯಂಗರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಶ್ರೀಲಂಕಾ ಡೈರಿ ಫೋಟೋಗಳನ್ನ ಮಿಲನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪರಿ ಕ್ಯೂಟ್ ಫೋಟೋ ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ʼನಮ್ ದುನಿಯಾ ನಮ್ ಸ್ಟೈಲ್ʼ ಸಿನಿಮಾದಲ್ಲಿ ಮಿಲನಾ ಕೃಷ್ಣ ನಟಿಸಿದ್ದರು. ಈ ಚಿತ್ರದ ಮೂಲಕ ಅವರಿಬ್ಬರಿಗೆ ಪರಿಚಯವಾಯ್ತು. ಬರೋಬ್ಬರಿ ಆರು ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಈ ಜೋಡಿ ಮದುವೆಯಾಗಿದ್ದರು.