ಹೆಣ್ಣಿಗೆ ಸೀರೆಯೇ ಅಂದ ಚೆಂದ.. ಸೀರೆಯಲ್ಲಿ ಹೆಣ್ಣು ಬೆಣ್ಣೆ ಅಂತಾ ನಮ್ ಕ್ರೇಜಿ ಸ್ಟಾರ್ ರವಿಚಂದ್ರನ್ ವರ್ಣಿಸಿದ್ದಾರೆ. ಸೀರೆಯಲ್ಲಿ ನಾರಿ ಅಂತಾ ನಾಗಿಣಿ ದೀಪಿಕಾ ದಾಸ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ದೀಪಿಕಾ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ದೇವತೆ, ಸೂಪರ್ ಅಂತೆಲ್ಲಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ದೀಪಿಕಾ ಟ್ರೆಡಿಷನಲ್ ಹಾಗೂ ಮಾರ್ಡನ್ ಎರಡು ಲುಕ್ ಗಳಲ್ಲಿಯೂ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಹಳದಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಸೀರೆಯಲ್ಲಿ ದೀಪಿಕಾ ಕಂಗೊಳಿಸಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ದೇಶ-ವಿದೇಶಗಳನ್ನು ಸುತ್ತುತ್ತುವುದು ಎಂದರೆ ಇಷ್ಟ.
ದೀಪಿಕಾ ದಾಸ್ ರಾಕಿಂಗ್ ಸ್ಟಾರ್ ಯಶ್ ತಂಗಿ. ಯಶ್ ಹಾಗೂ ಬಿಗ್ಬಾಸ್ ಖ್ಯಾತಿಯ ದೀಪಿಕಾ ದಾಸ್ ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳು. ಆದರೆ ಯಾವತ್ತೂ ಯಶ್ ನಮ್ಮ ಅಣ್ಣ ಅಂತ ದೀಪಿಕಾ ದಾಸ್ ಹೇಳುವುದಿಲ್ಲ.