ಬೆಳಗಾವಿ: ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲ.
ಗೃಹಸಚಿವರೂ ಇದ್ದು ಇಲ್ಲದಂತಾಗಿದೆ. ಏನೇ ಪ್ರಕರಣ ಆದರೂ ಅಂಕಿ ಅಂಶ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರಿಗೆ ಭರವಸೆ ಇಲ್ಲದಾಗಿದೆ. ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರವೇ ಉತ್ತಮ ಎಂದು ಹಲವರು ಹೇಳುತ್ತಿದ್ದಾರೆ. ಕಾಂಗ್ರೆಸ್ಗೆ 10 ರೂ. ಕೊಡುವ ಯೋಗ್ಯತೆ ಇಲ್ಲ. ಗುತ್ತಿಗೆದಾರರ, ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿವೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ.
ಮೋದಿ ಅವರು ಸಿಲಿಂಡರ್ ಬೆಲೆ ಎರಡು ಬಾರಿ ಇಳಿಸಿದ್ದಾರೆ. ಈಗ ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಯಾವುದಾದರೂ ಇಳಿಸಿ ಜಾಸ್ತಿ ಮಾಡಿದ್ದಾರೆ. ಆಗ ನಾನು ಒಪ್ಪುತ್ತಿದ್ದೆ. ಈಗ ಎಲ್ಲದರ ಮೇಲೂ ತೆರಿಗೆ ಹೆಚ್ಚಾಗಿದೆ” ಎಂದು ಆರೋಪಿಸಿದರು.