ಪಂದ್ಯ ಟೈ ಆದ ಹಿನ್ನೆಲೆ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಆರ್ಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ.
ಬೆಂಗಳೂರಿನಲ್ಲಿ ಮೂರು ದಿನ ಭಾರೀ ಮಳೆ: ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!
ಟಾಸ್ ಗೆದ್ದ ಆರ್ಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ 189 ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 188 ರನ್ಗಳಿಸಿ ಸೂಪರ್ ಓವರ್ವರೆಗೂ ಬಂದಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 5 ಬಾಲ್ಗೆ 2 ವಿಕೆಟ್ ಕಳೆದುಕೊಂಡು 11 ರನ್ಗಳನ್ನು ಕಲೆಹಾಕುವ ಮೂಲಕ 12 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 4 ಬಾಲ್ಗೆ ಯಾವುದೇ ವಿಕೆಟ್ ಇಲ್ಲದೆ 13 ರನ್ ಕಲೆಹಾಕುವ ಮೂಲಕ ಗೆಲುವು ಸಾಧಿಸಿತು.
ಡೆಲ್ಲಿ ಬ್ಯಾಟಿಂಗ್: ಟಾಸ್ ಸೋತು ಮೊದಲು ಡೆಲ್ಲಿ ಮೊದಲು ಬ್ಯಾಟ್ ಮಾಡಿತು. ಜೇಕ್ ಪ್ರೇಸರ್ ಮೆಕ್ಗರ್ಕ್ ಕೇವಲ 9 ರನ್ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಜೈಸ್ವಾಲ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕರುಣ್ ನಾಯರ್ ಒಂದೂ ರನ್ಗಳಿಸದೇ ರನ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. 3ನೇ ವಿಕೆಟ್ಗೆ ಅಭಿಷೇಕ್ ಪೊರೆಲ್ ಹಾಗೂ ಕೆಎಲ್ ರಾಹುಲ್ 63 ರನ್ಗಳಿಸಿದರು.