ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸಿ ಮನೆಯಿಂದ ಜಿರಳೆಗಳನ್ನು ಓಡಿಸಬಹುದು.
ಮಾರಣಾಂತಿಕ ಹಲ್ಲೆ ಪ್ರಕರಣ: ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ ಬಿಬಿಎಂಪಿ ಲಾರಿ ಚಾಲಕ!
ಜಿರಳೆಗಳು ಇಂದು ಪ್ರತಿಯೊಬ್ಬರ ಮನೆಯ ಸದಸ್ಯನಂತಾಗಿದೆ. ಕಾರಣ ಯಾವ ಮನೆ ನೋಡಿದ್ರೂ ಒಂದಾದ್ರೂ ಜಿರಳೆ ಇದ್ದೇ ಇರುತ್ತೆ. ಆಕಡೆ ಈಕಡೆ ಓಡಾಡಿಕೊಂಡು ಕಣ್ಣಿಗೆ ಕಾಣುತ್ತಿರುತ್ತದೆ. ಹೆಚ್ಚಾಗಿ ಈ ಜಿರಳೆಗಳು ಅಡುಗೆಮನೆಗಳು, ಒಳಚರಂಡಿ ಪ್ರದೇಶಗಳು ಮತ್ತು ಅಂಗಡಿಗಳಲ್ಲಿ ಕಾಣಸಿಗುತ್ತವೆ. ನೋಡಲು ಚಿಕ್ಕದಾಗಿದ್ದರೂ ಇದರ ಅಪಾಯ ಮಾತ್ರ ದೊಡ್ಡದು. ಏಕೆಂದರೆ ಇದು ಡೇಂಜರಸ್ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತೆ. ಆದ್ರೆ ಇದೆಲ್ಲಾ ತಿಳಿಯದೇ ಅದೆಷ್ಟೋ ಜನ ಜಿರಳೆಗಳನ್ನ ಕಾಲಲ್ಲೇ ತುಳಿದು ಸಾಯಿಸುತ್ತಾರೆ.
ಆದರೆ ಹೀಗೆ ಮಾಡುವುದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಅವುಗಳನ್ನು ಬೆನ್ನಟ್ಟಿ ತುಳಿದು ಸಾಯಿಸುವ ಬದಲು, ಕೀಟನಾಶಕಗಳಿಂದ ಓಡಿಸಬೇಕು ಎಂದು ಇಂಡಿಯಾ ಪೆಸ್ಟ್ ಕಂಟ್ರೋಲ್ ಕಂಪನಿಯ ದೀಪಕ್ ಶರ್ಮಾ ಹೇಳಿದ್ದಾರೆ. ಹಾಗಿದ್ರೆ ಇದಕ್ಕೆ ಕಾರಣಗಳೇನು ಎಂಬುದರ ಮಾಹಿತಿ ಇಲ್ಲಿದೆ ಓದಿ.
ಜಿರಳೆಗಳು ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾ ಸೇರಿದಂತೆ ವಿವಿಧ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿದೆ. ಒಂದು ವೇಳೆ ಏನೂ ಆಗಲ್ಲ ಅಂತ ತುಳಿದು ಸಾಯಿಸಿದರೆ, ಅವುಗಳ ದೇಹದಲ್ಲಿರುವ ಬ್ಯಾಕ್ಟೀರಿಯಾ, ರೋಗಕಾರಕಗಳು ಸತ್ತ ಜಾಗದಲ್ಲೇ ಸೇರಿಕೊಳ್ಳುತ್ತವೆ. ಇದರಿಂದ ಮನೆಯಲ್ಲಿ ಬ್ಯಾಕ್ಟೀರಿಯಾ ಮತ್ತಷ್ಟು ಹರಡಲು ಕಾರಣವಾಗಬಹುದು. ಇನ್ನು ಕೊಂದು ಬಿಸಾಕಿದ ಜಿರಳೆಯನ್ನು ತಿನ್ನಲು ಇರುವೆ, ಇತರ ಕೀಟಗಳು ಕಾದು ಕುಳಿತಿರುತ್ತವೆ.
ನಂತರ ಈ ಇರುವೆ, ಕೀಟಗಳಿಂದಲೂ ಬ್ಯಾಕ್ಟೀರಿಯಾ ಮನೆಯಲ್ಲಿ ಹರಡಬಹುದು. ಮತ್ತೊಂದೆಡೆ, ನೀವು ಜಿರಳೆಗಳನ್ನು ನಿಮ್ಮ ಪಾದಗಳಿಂದ ಕೊಲ್ಲಲು ಮುಂದಾದರೆ, ಅವು ಅಹಿತಕರ ವಾಸನೆಯನ್ನು ಹೊರಸೂಸಬಹುದು. ಅದಕ್ಕಾಗಿಯೇ ಅವುಗಳನ್ನು ನೇರವಾಗಿ ತುಳಿದು ಸಾಯಿಸಬಾರದು ಎನ್ನುತ್ತಾರೆ ತಜ್ಞರು.
ಕಾಲಿನಲ್ಲಿ ನೀವು ಜಿರಳೆಯನ್ನು ಕೊಲ್ಲಲು ಯತ್ನಿಸಿದಾಗ, ಅದರ ದೇಹದಲ್ಲಿರುವ ಮೊಟ್ಟೆಗಳು ಸಹ ಹೊರಬರಬಹುದು. ಇದು ಮತ್ತಷ್ಟು ಅಪಾಯಕಾರಿಯನ್ನಾಗಿ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ ಎಂದು ದೀಪಕ್ ಹೇಳುತ್ತಾರೆ. ಜಿರಳೆಗಳು ಸಾಮಾನ್ಯವಾಗಿ ತಮ್ಮ ಮೊಟ್ಟೆಗಳನ್ನು ರಕ್ಷಣಾತ್ಮಕ ಚಿಪ್ಪಿನಲ್ಲಿ ಇಡುತ್ತವೆ. ಇದನ್ನು ಒಥೆಕಾ ಎಂದು ಕರೆಯಲಾಗುತ್ತದೆ.
ಪ್ರತಿ ಜಿರಳೆಯಲ್ಲೂ 50 ಮೊಟ್ಟೆಗಳಿರುತ್ತವೆ ಎನ್ನುತ್ತಾರೆ. ಹೆಣ್ಣು ಜಿರಳೆ ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಸುರಕ್ಷಿತವಾಗಿ ಸಂಗ್ರಹಿಸುತ್ತದೆ. ಆದರೆ ಮೊಟ್ಟೆ ಇಡದ ಜಿರಳೆಯನ್ನು ನಾವು ತುಳಿದರೆ, ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎನ್ನಲಾಗಿದೆ.
ಜಿರಳೆಗಳು ರಾತ್ರಿಯಲ್ಲಿ ಮತ್ತು ಬೆಚ್ಚಗಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಿಲಿಂಡರ್ಗಳ ಕೆಳಗೆ, ಸಿಂಕ್ ಅಡಿಯಲ್ಲಿ ಮತ್ತು ಫ್ರಿಡ್ಜ್ನ ಹಿಂದೆಯೂ ಇರುತ್ತದೆ. ಅಂತಹ ಪ್ರದೇಶಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಿ ಅವುಗಳನ್ನು ಕೊಲ್ಲಬೇಕು ಎನ್ನುತ್ತಾರೆ ತಜ್ಞರು. ಯಾವುದೇ ಸಂದರ್ಭದಲ್ಲಿ ನೀವು ಅವುಗಳನ್ನು ನಿಮ್ಮ ಕೈಗಳಿಂದ ಮುಟ್ಟಬಾರದು ಅಥವಾ ನಿಮ್ಮ ಪಾದಗಳಿಂದ ಅವುಗಳ ಮೇಲೆ ಹೆಜ್ಜೆ ಹಾಕಬಾರದು. ಇನ್ನು ಮನೆಯಲ್ಲಿ ಜಿರಳೆಗಳು ಇರಬಾರದು ಅಂದ್ರೆ ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿ.
ಜನಪ್ರಿಯ ಬಾಣಸಿಗ ಅನನ್ಯಾ ಬ್ಯಾನರ್ಜಿ ಜಿರಳೆಗಳನ್ನು ಓಡಿಸಲು ಕೆಲವು ಟ್ರಿಕ್ಸ್ ನೀಡಿದ್ದಾರೆ. ನೀವು ಇವುಗಳನ್ನು ಫಾಲೋ ಮಾಡಿದ್ರೆ, ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಮತ್ತು ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಅಡುಗೆಮನೆಯ ಮೂಲೆಗಳಲ್ಲಿ ಮತ್ತು ಕತ್ತಲೆ ಪ್ರದೇಶಗಳಲ್ಲಿ ಬಿರಿಯಾನಿ ಎಲೆ ಇಡಿ. ಜಿರಳೆಗಳು ಇವುಗಳ ವಾಸನೆಯನ್ನು ಸಹಿಸುವುದಿಲ್ಲ. ಲವಂಗ, ದಾಲ್ಚಿನ್ನಿ ಮತ್ತು ಬೇವಿನ ಎಲೆಗಳನ್ನು ಸಹ ಈ ರೀತಿ ಬಳಸಬಹುದು. ಬೋರಿಕ್ ಆಸಿಡ್ ಪುಡಿಯನ್ನು ಸಕ್ಕರೆಯೊಂದಿಗೆ ಬೆರೆಸಿ ಅಡುಗೆಮನೆಯಲ್ಲಿ ಇಡಿ. ಅವು ಸಕ್ಕರೆಯೊಂದಿಗೆ ಬೋರಿಕ್ ಆಮ್ಲವನ್ನು ಸೇವಿಸುವುದರಿಂದ ಸಾಯುತ್ತವೆ. ಆದರೆ, ನಾವು ತಿನ್ನುವ ಆಹಾರ ಪದಾರ್ಥಗಳಿಂದ ಅದನ್ನು ದೂರವಿಡಬೇಕು.