ಚಿತ್ರದುರ್ಗ : ಜಿಲ್ಲೆಯ ಎನ್ ಮಹದೇವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದ ಶ್ರೀ ಸದ್ಗುರು ಸೇವಾಲಾಲ್ ಹಾಗೂ ಶ್ರೀ ಮಾರಿಯಮ್ಮ ದೇವಿಯ ತೀಜ್ (ಗೋಧಿ) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಹಬ್ಬದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಎನ್ .ರಘುಮೂರ್ತಿ ಅವರು ಮಾತನಾಡಿ, ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಶ್ರೀಮಂತವಾದ ಸಮಾಜ ಇದ್ದರೆ ಅದು ಬಂಜಾರ ಸಮುದಾಯ. ಶ್ರೀ ಸದ್ಗುರು ಸೇವಾಲಾಲ್ ಹಾಕಿಕೊಟ್ಟ ದಾರಿಯಲ್ಲಿ ಬಂಜಾರ ಸಮುದಾಯ ಇಡೀ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ನೆಲೆಗಟ್ಟಿನಲ್ಲಿ ಸ್ವಾಭಿಮಾನ ಇಟ್ಟುಕೊಂಡು ಬಂಜಾರ ಸಮುದಾಯ ಬದುಕುತ್ತಿದ್ದಾರೆ.
ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರ ಸ್ವಾಭಾವಿಕ ; ಸಚಿವ ಸತೀಶ್ ಜಾರಕಿಹೊಳಿ
ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಶಿಕ್ಷಣ ಪಡೆದುಕೊಂಡು ಈ ರಾಷ್ಟ್ರದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಇರುವುದರಿಂದ ದಕ್ಷಿಣ ಭಾರತ ಹಾಗೂ ಈ ಭಾಗದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ. ಇಡೀ ಮನುಕುಲಕ್ಕೆ ಸಮಾಜಕ್ಕೆ ಬಂಜಾರ ಸಮುದಾಯ ನಮಗೆಲ್ಲಾ ಪ್ರೇರಣೆಯಾಗಿದೆ. ಆದ್ದರಿಂದ ಬಂಜಾರ ಸಮುದಾಯ ಈ ಧಾರ್ಮಿಕ ಆಚರಣೆ ಕಾರ್ಯಗಳ ಯಾವತ್ತೂ ಕೈ ಬಿಡಬಾರದು. ಈ ಗ್ರಾಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಸಹ ಅಂಬೇಡ್ಕರ್ ಮತ್ತು ಬಸವಣ್ಣನ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮನುಮೈನಹಟ್ಟಿ ಶ್ರೀ ಸೇವಾಲಾಲ್ ಸೇವಾ ಸಮಿತಿ. ಶ್ರೀ ದಂಡಿನ ಮಾರಮ್ಮ ಸೇವಾ ಸಮಿತಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಲ್ಲಾ ಮನುಮೈನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು