ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ನಜ್ರಿಯಾ ನಜಿಮ್. ಇವರ ಪತಿ ಕೂಡ ಖ್ಯಾತ ನಟ. ಇತ್ತೀಚೆಗೆ ಸೂಪರ್ ಹಿಟ್ ಕಂಡ ಸಿನಿಮಾ ಆವೇಶಂ ನಟ, ಪುಷ್ಪದ ವಿಲನ್ ಫಹಾದ್ ಫಾಸಿಲ್ ನಜ್ರಿಯಾ ಗಂಡ. ಒಂದಷ್ಟು ದಿನಗಳಿಂದ ನಜ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಚಿತ್ರ ಸೂಪರ್ ಹಿಟ್ ಆದರೂ ನಟಿ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಹೀಗಾಗಿ ನಜ್ರಿಯಾ ಫಹಾದ್ ನಡುವೆ ಸರಿ ಇಲ್ಲ ಅನ್ನೋ ಸುದ್ದಿ ಓಡಾಡಿತ್ತು. ಇದೀಗ ತಮ್ಮ ಅನುಪಸ್ಥಿಗೆ ನಜ್ರಿಯಾ ಕಾರಣ ಬಿಚ್ಚಿಟ್ಟಿದ್ದಾರೆ.
ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದ ನಜ್ರಿಯಾ ಏಕಾಏಕಿ ಸೈಲೆಂಟ್ ಆಗಿದ್ದೇಕೆ ಅನ್ನೋದಕ್ಕೆ ಪತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ. ‘ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನಾನು ಸ್ವಲ್ಪ ಸಮಯದಿಂದ ಎಲ್ಲರಿಂದ ದೂರ ಇದ್ದೆ. ನನಗೆ ಸ್ವಲ್ಪ ಸಮಯ ಬೇಕಿತ್ತು. ನಿಮ್ಮಲ್ಲಿ ಹಲವರಿಗೆ ತಿಳಿದಿರುವಂತೆ, ನಾನು ಯಾವಾಗಲೂ ತುಂಬಾ ಆಕ್ಟೀವ್. ಕಳೆದ ಕೆಲವು ತಿಂಗಳುಗಳಿಂದ ನಾನು ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ ಎಂದಿದ್ದಾರೆ ನಜ್ರಿಯಾ.
ನನ್ನ ಮನಸ್ಸು ಸರಿ ಇಲ್ಲ’ ಎಂದಿದ್ದಾರೆ ಅವರು. . ನನ್ನ 30 ನೇ ಹುಟ್ಟುಹಬ್ಬ, ಹೊಸ ವರ್ಷದ ಆಚರಣೆ, ನನ್ನ ಸೂಕ್ಷ್ಮದರ್ಶಿನಿ ಚಿತ್ರದ ಯಶಸ್ಸು ಮತ್ತು ಇತರ ಹಲವು ಪ್ರಮುಖ ಕ್ಷಣಗಳು ಮಿಸ್ ಆದವು, ಕ್ಷಮಿಸಿ’ ‘ನಾನು ಏಕೆ ಮೌನವಾಗಿದ್ದೆನೆಂದು ವಿವರಿಸದಿದ್ದಕ್ಕಾಗಿ, ಫೋನ್ ಕರೆಗಳನ್ನು ಸ್ವೀಕರಿಸದಿದ್ದಕ್ಕಾಗಿ ಅಥವಾ ಸಂದೇಶಗಳಿಗೆ ಉತ್ತರಿಸದಿದ್ದಕ್ಕಾಗಿ ನನ್ನ ಎಲ್ಲಾ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಉಂಟುಮಾಡಿದ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಕೆಲಸಕ್ಕಾಗಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ನನ್ನ ಎಲ್ಲಾ ಸಹನಟರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕ್ಷಮೆಯಾಚಿಸುತ್ತೇನೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು, ಆದರೆ ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆʼ ಎಂದು ಪತ್ರ ಮೂಲಕ ತಿಳಿಸಿದ್ದಾರೆ.
ನಜ್ರಿಯಾಗೆ ಕನ್ನಡದ ಸೆಲೆಬ್ರಿಟಿಗಳ ಜತೆ ಒಳ್ಳೆಯ ನಂಟಿದೆ. ಮೇಘನಾ ರಾಜ್ ಹಾಗೂ ನಜ್ರಿಯಾ ಉತ್ತಮ ಗೆಳತಿಯರು. ರಾಯನ್ ನಾಮಕರಣಕ್ಕೆ ನಜ್ರಿಯಾ ಕೂಡ ಆಗಮಿಸಿದ್ದರು. ಅವರಿಗೆ ಸರ್ಜಾ ಕುಟುಂಬದ ಜತೆ ಒಳ್ಳೆಯ ನಂಟು ಬೆಳೆದಿದೆ. ಮೇಘನಾ ರಾಜ್ ಈ ಮೊದಲು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ಆ ವೇಳೆ ಮೇಘನಾ ಹಾಗೂ ನಜ್ರಿಯಾ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ.