ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ 2 ವರ್ಷದಿಂದ ಅಧ್ಯಕ್ಷರಾಗಿದ್ದ ಎಂ. ಮುನೇಗೌಡ ಇವರ ವಿರುದ್ದ ಇಂದು 11 ಜನ ನಿರ್ದೇಶಕರು ಅವಿಶ್ವಾಸ ಮಂಡನೆ ಮಾಡಿದರು.
ಮೂರು ವರ್ಷಗಳ ಹಿಂದೆ ಹಾಡೋನಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ನಡೆದಿತ್ತು.ಚುನಾವಣೆಯಲ್ಲಿ 10 ಜನ ಪುರುಷ ಅಭ್ಯರ್ಥಿಗಳು,2 ಮಹಿಳಾ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ಕಾಂಗ್ರೆಸ್ ನ ಹಿರಿಯ ಮುಖಂಡರು,ಪಕ್ಷದ ಕಾರ್ಯಕರ್ತರು ಸೇರಿ ಮೊದಲ ಬಾರಿಗೆ ಒಂದು ವರ್ಷಕ್ಕೆ ಸೀಮಿತವಾಗಿ ಗಂಗಸಂದ್ರದ ಶ್ರೀಧರ್ ಜಿ ಕೆ ಅವರನ್ನು ಆಯ್ಕೆ ಮಾಡಲಾಗಿತ್ತು.
ಸಂಘದ ಎಲ್ಲಾ ನಿರ್ದೇಶಕರು ಸೇರಿ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ತಿರುಮಗೊಂಡನಹಳ್ಳಿ ಗ್ರಾಮದ ಹೆಚ್ ನಂಜೇಗೌಡ ಆದ ನನ್ನನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಕೈಗೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಹಾಡೋನಹಳ್ಳಿ ಗ್ರಾಮದ ಎಂ.ಮುನೇಗೌಡ ರನ್ನು ಒಂದು ವರ್ಷಕ್ಕೆ ಸೀಮಿತವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು..! ಏನಾಗುತ್ತೆ ಗೊತ್ತಾ..?
ಪಕ್ಷದ ಹಿರಿಯ ನಾಯಕರ ಮಾತಿಗೂ ಕ್ಯಾರೆ ಎನ್ನದೆ ಕಾರ್ಯಕರ್ತರು ಹಾಗೂ ಸಂಘದ ನಿರ್ದೇಶಕರಿಗೂ ಬೆಲೆ ಕೊಡದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಪಕ್ಷಾಂತರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಇದರಿಂದಾಗಿ ಬೇಸತ್ತು ಇಂದು 12 ನಿರ್ದೇಶಕರು ಸೇರಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಗೊಳಸಿದ್ದೇವೆ ಎಂದು ನಿರ್ದೇಶಕ ಹೆಚ್ ನಂಜೇಗೌಡ ತಿಳಿಸಿದರು..