ಡೆವಿಲ್.. ದರ್ಶನ್ ನಟಿಸುತ್ತಿರುವ ಮೋಸ್ಟ್ ಅಪ್ ಕಮ್ಮಿಂಗ್ ಚಿತ್ರ. ಸದ್ಯ ಈ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ವರ್ಷವೇ ಡೆವಿಲ್ ಚಿತ್ರವನ್ನು ಅಖಾಡಕ್ಕಿಳಿಸಲು ನಿರ್ದೇಶಕ ಪ್ರಕಾಶ್ ವೀರ್ ಸಜ್ಜಾಗುತ್ತಿದ್ದಾರಂತೆ. ಅದಕ್ಕಾಗಿ ಚಿತ್ರೀಕರಣಕ್ಕೆ ಆವೇಗ ನೀಡಲಾಗಿದೆಯಂತೆ.
ಡೆವಿಲ್ ಟೈಟಲ್ ದರ್ಶನ್ ಫ್ಯಾನ್ಸ್ ಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸದ್ಯ ಡಿಪಡೆ ಡೆವಿಲ್ ಜಪ ಮಾಡ್ತಿದೆ. ಹೀಗಿರುವಾಗ್ಲೇ ಇದೇ ಟೈಟಲ್ನಲ್ಲಿ ಸೌತ್ ಇಂಡಿಯಾದ ಸ್ಟಾರ್ ನಟರೊಬ್ಬರು ಸಿನಿಮಾ ಮಾಡ್ತಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.
ಅರ್ಜುನ್ ರೆಡ್ಡಿ, ಅನಿಮಲ್ ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಎಂಬ ಟೈಟಲ್ ನಡಿ ಹೊಸ ಚಿತ್ರ ಮಾಡೋದಿಕ್ಕೆ ಹೊರಟಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ಅಭಿನಯಿಸಲಿದ್ದಾರಂತೆ. ಈ ಸಿನಿಮಾಗೆ ಡೆವಿಲ್ ಅಂತಾ ಟೈಟಲ್ ಫೈನಲ್ ಆಗಿದೆ ಎಂಬ ಸಮಾಚಾರ ಹೊರಬಿದ್ದಿದೆ.
ಸದ್ಯ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾ ಮಾಡುತ್ತಿದ್ದಾರೆ. ಇದಾದ ಬಳಿಕ ಅನಿಮಲ್ ಪಾರ್ಟ್ 2 ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದ್ರೆ ಸ್ಪಿರಿಟ್ ಸಿನಿಮಾ ಕಂಪ್ಲೀಟ್ ಆದ ಬಳಿಕ ಡೆವಿಲ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆಯಂತೆ.ರಾಮ್ ಚರಣ್ ಗೂ ಮುನ್ನಾ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಸಿನಿಮಾದ ಕಥೆಯನ್ನು ಮಹೇಶ್ ಬಾಬು ಅವರಿಗೆ ಹೇಳಿದ್ದರಂತೆ. ಅನಿಮಲ್ ಚಿತ್ರಕ್ಕೂ ಮೀರಿದ ವೈಲೆನ್ಸ್ ಈ ಚಿತ್ರದಲ್ಲಿ ಇದ್ದಿದ್ದರಿಂದ ಡೆವಿಲ್ ಗೆ ಪ್ರಿನ್ಸ್ ನೋ ಎಂದಿದ್ದರು. ಹೀಗಾಗಿ ರಾಮ್ ಚರಣ್ ಗೆ ಡೆವಿಲ್ ಕಥೆ ಹೇಳಿ ಸಂದೀಪ್ ಒಪ್ಪಿಸಿದ್ದಾರಂತೆ.